'ಮರುಶಿಕ್ಷಣ ಶಿಬಿರ'ಗಳನ್ನು ಸಮರ್ಥಿಸಿದ ಚೀನಾ

Update: 2019-12-09 18:01 GMT

ಬೀಜಿಂಗ್, ಡಿ. 9: ಕ್ಸಿನ್‌ಜಿಯಾಂಗ್ ವಲಯದಲ್ಲಿನ 'ಮರುಶಿಕ್ಷಣ ಶಿಬಿರ'ಗಳ ಬೃಹತ್ ಜಾಲವನ್ನು ಚೀನಾ ಸೋಮವಾರ ಸಮರ್ಥಿಸಿಕೊಂಡಿದೆ ಹಾಗೂ ನಿವಾಸಿಗಳಿಗೆ 'ತರಬೇತಿ ನೀಡುವುದನ್ನು' ಮುಂದುವರಿಸುವುದಾಗಿ ಹೇಳಿದೆ.

ಈ ವಲಯದಲ್ಲಿರುವ ಉಯಿಘರ್ ಮುಸ್ಲಿಮರ ಮೇಲೆ ಸರಕಾರ ಇಟ್ಟಿರುವ ಕಣ್ಗಾವಲು ಮತ್ತು ಅವರ ಮೇಲಿನ ನಿಯಂತ್ರಣಗಳನ್ನು ವಿವರಿಸುವ ಸರಕಾರಿ ದಾಖಲೆಗಳ ಸೋರಿಕೆಯ ಹಿನ್ನೆಲೆಯಲ್ಲಿ ಅದು ಈ ಹೇಳಿಕೆ ನೀಡಿದೆ.

ಉಯಿಘರ್ ಮುಸ್ಲಿಮರ ಮೇಲಿನ ದಮನ ಕಾರ್ಯಾಚರಣೆಗೆ ಕಾರಣವಾಗಿರುವ ಚೀನಾದ ಅಧಿಕಾರಿಗಳ ವಿರುದ್ಧ ದಿಗ್ಬಂಧನ ವಿಧಿಸಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಒತ್ತಾಯಿಸುವ ಮಸೂದೆಯೊಂದನ್ನು ಅಮೆರಿಕ ಕಾಂಗ್ರೆಸ್ ಇತ್ತೀಚೆಗೆ ಅನುಮೋದಿಸಿದೆ.

ಈ ಎಲ್ಲ ಹಿನ್ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಚೀನಾ ಸರಕಾರ ಬೃಹತ್ ಪ್ರಚಾರ ಆಂದೋಲನದಲ್ಲಿ ತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News