ಆಸ್ಟ್ರೇಲಿಯ ಕಾಡ್ಗಿಚ್ಚಿನಲ್ಲಿ 2,000 ಕೋಲಾ ಕರಡಿಗಳು ನಾಶ

Update: 2019-12-09 18:09 GMT

ಸಿಡ್ನಿ (ಆಸ್ಟ್ರೇಲಿಯ), ಡಿ. 9: ಆಸ್ಟ್ರೇಲಿಯದಲ್ಲಿ ನವೆಂಬರ್ ತಿಂಗಳಿನಿಂದ ಆರಂಭಗೊಂಡಿರುವ ಬೃಹತ್ ಕಾಡ್ಗಿಚ್ಚುಗಳಿಗೆ 2,000ಕ್ಕೂ ಅಧಿಕ ಕೋಲಾ ಕರಡಿಗಳು ಬಲಿಯಾಗಿವೆ ಎಂದು ಆಸ್ಟ್ರೇಲಿಯದ ಪರಿಸರ ತಜ್ಞ ಡೇಲನ್ ಪಫ್ ಸೋಮವಾರ ಹೇಳಿದ್ದಾರೆ.

ಕೋಲಾ ಕರಡಿಗಳು ಅಪಾಯದಂಚಿನಲ್ಲಿರುವ ಪ್ರಾಣಿ ಪ್ರಭೇದ ಎಂಬುದಾಗಿ ಘೋಷಿಸಲಾಗಿದೆ.

ಈ ವಲಯದಲ್ಲಿ ಸುಮಾರು 8,400 ಕೋಲಾ ಕರಡಿಗಳು ಇದ್ದು, ಆ ಪೈಕಿ ಸುಮಾರು 25 ಶೇಕಡ ಪ್ರಾಣಿಗಳು ಇತ್ತೀಚಿನ ಕಾಡಿನ ಬೆಂಕಿಯಲ್ಲಿ ಸತ್ತಿವೆ ಎಂದು ಅವರು 'ಎಫೆ ನ್ಯೂಸ್'ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News