ಡಿ.14-15: ನಿಟ್ಟೂರು ಪ್ರೌಢಾಲೆಯ ‘ಸುವರ್ಣ ಪರ್ವ’ ಸಂಭ್ರಮ

Update: 2019-12-10 14:08 GMT

ಉಡುಪಿ, ಡಿ.10: ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 1971ರಲ್ಲಿ ಸ್ಥಾಪನೆಗೊಂಡ ನಿಟ್ಟೂರು ಪ್ರೌಢ ಶಾಲೆ ಸುವರ್ಣ ವರ್ಷದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಡಿ.14 ಮತ್ತು 15 ರಂದು ಸುವರ್ಣ ಪರ್ವ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ ಎಂದು ಸುವರ್ಣ ಪರ್ವ ಸಮಿತಿಯ ಕಾರ್ಯದರ್ಶಿ, ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಶಾಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.14ರಂದು ಬೆಳಗ್ಗೆ 9ಗಂಟೆಗೆ ರಕ್ಷಕರ ಸಂಭ್ರಮ, ಸಂಜೆ 5ಗಂಟೆಗೆ ವೀರ ಅಭಿಮನ್ಯು ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾತ್ರಿ 7ಗಂಟೆಗೆ ನಡೆಯುವ ಶಾಲಾ ವಾರ್ಷಿಕೋತ್ಸವದಲ್ಲಿ ಶಾಲಾ ಸಾಕ್ಷಚಿತ್ರವನ್ನು ಶಿಕ್ಷಣ ತಜ್ಞೆ ಬಬಿತಾ ರಾಜ್ ಬಿಡುಗಡೆ ಮಾಡಲಿರುವರು. ರಾತ್ರಿ 8:30ಕ್ಕೆ ಜೀಮೂತ ವಾಹನ ನಾಟಕ, 9:15ಕ್ಕೆ ಭರತ ನಾಟ್ಯ, 9:30ರಿಂದ ನೃತ್ಯ ವೈವಿಧ್ಯ ಜರಗಲಿದೆ ಎಂದರು.

ಡಿ.15ರಂದು ಬೆಳಗ್ಗೆ 11ಗಂಟೆಗೆ ನಡೆಯುವ ಹಳೆ ವಿದ್ಯಾರ್ಥಿಗಳ ಸಂಭ್ರಮ ಕಾರ್ಯಕ್ರಮದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸೆಸೆಲ್ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ಸನ್ಮಾನ ನೆರವೇರಿಸಲಿರುವರು. ಸಂಸದೆ ಶೋಭಾ ಕರಂದ್ಲಾಜೆ ಸುವರ್ಣ ಪತ್ರ ಬಿಡುಗಡೆ ಮಾಡಲಿರುವರು. ರಾತ್ರಿ 8ಗಂಟೆಗೆ ಹಳೆ ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ಕಿರುನಾಟಕ ಪ್ರದರ್ಶನಗೊಳ್ಳಲಿದೆ.

ಸಂಜೆ 5ಗಂಟೆಗೆ ಸುವರ್ಣ ಪರ್ವದ ಉದ್ಘಾಟನೆಯನ್ನು ಉದ್ಯಮಿ ಜಿ.ಶಂಕರ್ ನೆರವೇರಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ ರಘುಪತಿ ಭಟ್ ವಹಿಸಲಿರು ವರು. ಈ ಸಂದರ್ಭದಲ್ಲಿ ನವೀಕೃತ ಮುಖ್ಯೋಪಾಧ್ಯಾಯರ ಕೊಠಡಿ, ಶಿಕ್ಷಕರ ಕೊಠಡಿ, ಸೋಲಾರ್ ವ್ಯವಸ್ಥೆಯನ್ನು ಉದ್ಘಾಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಯೋಗೀಶ್ಚಂದ್ರಾಧರ, ಕೋಶಾಧಿಕಾರಿ ಪ್ರದೀಪ್ ಜೋಗಿ, ನಿಟ್ಟೂರು ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ಭಾಸ್ಕರ ಡಿ.ಸುವರ್ಣ, ಸುಮನಾ ಆಚಾರ್ಯ, ಎಸ್.ವಿ.ಭಟ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News