ಮಧ್ಯವರ್ತಿಗಳ ಲಾಭಕ್ಕಾಗಿ ಕೃತಕ ಬೆಲೆ ಏರಿಕೆಯ ಸೃಷ್ಠಿ: ಮಹಾಂತೇಶ್

Update: 2019-12-10 14:09 GMT

ಬೈಂದೂರು, ಡಿ.10: ಈರುಳ್ಳಿ ಬೆಲೆ ಗಗನಕ್ಕೇರಿದರೂ ಇದರ ಪ್ರಯೋಜನ ರೈತರಿಗೆ ಸಿಗುತ್ತಿಲ್ಲ. ಇದರಿಂದ ಮಧ್ಯವರ್ತಿಗಳು ದೊಡ್ಡ ಮಟ್ಟದಲ್ಲಿ ಇದರ ಲಾಭವನ್ನು ಪಡೆಯುತ್ತಿದ್ದಾರೆಯೇ ಹೊರತು ಅದನ್ನು ಖರೀದಿಸುವ ಗ್ರಾಹಕ ರಿಗೆ ಯಾವುದೇ ಲಾಭ ಇಲ್ಲ. ಹೀಗೆ ದೇಶದಲ್ಲಿ ಕೃತಕ ಬೆಲೆ ಏರಿಕೆಯನ್ನು ಸೃಷ್ಠಿಸಲಾಗಿದೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹಾಂತೇಶ್ ಆರೋಪಿಸಿದ್ದಾರೆ.

ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಡಬ್ಲುಎಫ್‌ಐ) ವತಿಯಿಂದ ಬೈಂದೂರು ಅಂಬೇಡ್ಕರ್ ಭವನದಲ್ಲಿ ರವಿವಾರ ಆಯೋಜಿಸಲಾದ ಬೈಂದೂರು ತಾಲೂಕು ಕಟ್ಟಡ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶದಲ್ಲಿ ಇಂದು ರೈತರು, ಕಾರ್ಮಿಕರು, ಮೀನುಗಾರರು ಸೇರಿದಂತೆ ವಿವಿಧ ಶ್ರಮಿಕ ವರ್ಗದ ನೋವು, ಸಮಸ್ಯೆಗಳ ಹಾಗೂ ಜನಸಾಮಾನ್ಯರ ಬೇಡಿಕೆಗಳ ಕುರಿತು ಚರ್ಚೆ ನಡೆಯುವ ಬದಲು ಕೇವಲ ರಾಜಕೀಯ ವಿಚಾರದಲ್ಲಿ ಚರ್ಚೆ ಗಳು ನಡೆಸಲಾ ಗುತ್ತಿದೆ. ಸರಕಾರದ ನೀತಿಗಳಿಂದಾಗಿ ಕಳೆದ ಮೂರು ವರ್ಷ ಗಳಲ್ಲಿ ಕೋಟ್ಯಂತರ ಉದೆ್ಯಿಗಗಳು ನಷ್ಟವಾಗಿವೆ ಎಂದರು.

ನೋಟು ರದ್ದತಿ, ಜಿಎಸ್‌ಟಿಯ ಪರಿಣಾಮವನ್ನು ಕಟ್ಟಡ ಕಾರ್ಮಿಕರು ಎದು ರಿಸುತ್ತಿದ್ದಾರೆ. ಸರಿಯಾದ ಉದ್ಯೋಗ ಇಲ್ಲದೆ ತ್ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ಬಂದಿದೆ ಎಂದ ಅವರು, ಕಾರ್ಮಿಕರ ಕೂಲಿಯನ್ನು ಏರಿಕೆ ಮಾಡಬೇಕು. ಸರಕಾರದ ಹಣದಿಂದಲೇ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷತೆಯನ್ನು ಬೈಂದೂರು ತಾಲೂಕು ಕಟ್ಟಡ ಕಾರ್ಮಿಕರು ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ದೇವಾಡಿಗ, ಕೋಶಾಧಿಕಾರಿ ರೋನಾಲ್ಡ್ ರಾಜೇಶ್ ಕ್ವಾಡ್ರಸ್, ಮುಖಂಡರಾದ ಮಾಧವ ಉಪ್ಪುಂದ, ರಾಜೀವ ದೇವಾಡಿಗ, ವಿಜಯ ಬಿ., ಉದಯ ಗಾಣಿಗ, ಮಂಜು ಬಡಾಕೆರೆ, ಅಮ್ಮಯ್ಯ ಪೂಜಾರಿ, ರಾಮ ಖಂಬದಕೋಣೆ, ನಾಗರತ್ನ ನಾಡ ಮೊದಲಾದವರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ವೆಂಕಟೇಶ್ ಕೋಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News