ಉಡುಪಿ: ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ-ಮಾರಾಟಕ್ಕೆ ಚಾಲನೆ

Update: 2019-12-10 14:12 GMT

ಉಡುಪಿ, ಡಿ.10: ಮೈಸೂರು ಇಂದು ಹಲವು ವಿಷಯಗಳಲ್ಲಿ ಬ್ರಾಂಡ್ ಆಗಿದೆ. ಕೆಎಸ್‌ಐಸಿನ ಮೈಸೂರ್ ಸಿಲ್ಕ್ ಸೀರೆಗಳು ದೇಶದಲ್ಲೇ ಒಳ್ಳೆಯ ಹೆಸರನ್ನು ಸಂಪಾದಿಸಿದೆ. ಭಾರತದಲ್ಲಿ ದೊರೆಯುವ ಹಲವು ರೇಷ್ಮೆಗಳಿಗಿಂತ, ಮೈಸೂರು ರೇಷ್ಮೆ ಉತ್ಪನ್ನಗಳು ವಿಭಿನ್ನವಾಗಿದ್ದು, ಹಲವು ವೈಶಿಷ್ಟತೆಗಳನ್ನು ಪಡೆದಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ (ಕೆಎಸ್‌ಐಸಿ) ವತಿಯಿಂದ ಉಡುಪಿಯ ಡಯಾನ ಹೋಟೆಲ್ ಸಭಾಂಗಣದಲ್ಲಿ ಇಂದಿನಿಂದ ಡಿ.13ರವರೆಗೆ ಆಯೋಜಿಸಲಾದ ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಹಾರಾಜರ ಕಾಲದಲ್ಲೇ ಮೈಸೂರನ್ನು ಬ್ರಾಂಡಿಂಗ್ ಮಾಡಲು ಒತ್ತು ನೀಡಿದ್ದು, ಇಂದಿಗೂ ಅಂತಹ ಕುರುಹು ಕಾಣಸಿಗುತ್ತದೆ. ಮೈಸೂರು ಸಿಲ್ಕ್, ಮೈಸೂರು ಪಾಕ್ ಇವುಗಳಿಗೆ ಉದಾಹರಣೆಗಳು. ಇಂದು ದೇಶ-ವಿದೇಶಗಳಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಮೈಸೂರು ಸಿಲ್ಕ್ ಸೀರೆಗಳು ಕೇವಲ ಕೆಎಸ್‌ಐಸಿ ಮಾರಾಟ ಮಳಿಗೆಗಳಲ್ಲಿ ಮಾತ್ರ ಲಭ್ಯವಿದ್ದು, ಇದೀಗ ಅವರು ಉಡುಪಿಗೆ ತಂದು, ನಾಲ್ಕು ದಿನಗಳ ಕಾಲ ಪ್ರದರ್ಶನ ಹಾಗೂ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಆಸುಪಾಸಿನ ಜಿಲ್ಲೆಗಳ ಜನರು ಇದರ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.

ಇಲ್ಲಿ ಪ್ರದರ್ಶನ ಹಾಗೂ ಮಾರಾಟಕ್ಕಿರುವ ಮೈಸೂರು ರೇಷ್ಮೆ ಸೀರೆ ಹಾಗೂ ಇತರ ಉತ್ಪನ್ನಗಳಿಗೆ ಶೇ.10ರಿಂದ 25ರಷ್ಟು ರಿಯಾಯಿತಿಯನ್ನು ನೀಡಲಾಗು ತ್ತದೆ ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಪ್ರಧಾನ ವ್ಯವಸ್ಥಾಪಕ ಭಾನುಪ್ರಕಾಶ್ ಎಸ್. ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನುಡಿದರು.

ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳು ಸರಕಾರಿ ಸಾಮ್ಯದ ಏಕೈಕ ಸಂಸ್ಥೆ ಯಾಗಿದ್ದು, ಇದಕ್ಕೆ 100ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಪ್ರಾಕೃತಿಕ ರೇಷ್ಮೆ ಗೂಡಿನಿಂದ ದೊರೆಯುವ ಅತ್ಯುತ್ತಮ ರೇಷ್ಮೆ ಹಾಗೂ ಪರಿಶುದ್ಧ ಚಿನ್ನದಿಂದ ಮಾಡಲ್ಪಟ್ಟಿವೆ. ಹಾಗೂ ಕೆಎಸ್‌ಐಸಿ ಮೈಸೂರು ಸಿಲ್ಕ್ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಾವಣಿ ಪಡೆುಕೊಂಡಿವೆ ಎಂದವರು ವಿವರಿಸಿದರು.

ಪ್ರತಿ ದಿನ ಸುಮಾರು 250 ಸೀರೆಗಳನ್ನು ತಯಾರಿಸಲಾಗುತಿತಿದ್ದು, 350ರಷ್ಟು ಸೀರೆಗಳಿಗೆ ಜನರಿಂದ ಬೇಡಿಕೆ ಇದೆ. ಪ್ರದರ್ಶನದಲ್ಲಿ 6 ಸಾವಿರ ರೂ.ನಿಂದ 1.50 ಲಕ್ಷ ರೂ. ವೌಲ್ಯದ ಸೀರೆಗಳು ಲ್ಯವಿದೆ. ಪ್ರದರ್ಶನ-ಮಾರಾಟದಲ್ಲಿ ಸಾಂಪ್ರದಾಯಿಕ ಮೈಸೂರು ರೇಷ್ಮೆ ಸೀರೆಗಳಲ್ಲದೇ, ಟೈ, ಸ್ಕಾರ್ಫ್, ಶರ್ಟ್‌ಗಳು, ನಾಜೂಕಿನ ವಿನ್ಯಾಸದ ಕ್ರೇಪ್ ಡಿ ಚೈನ್, ಜಾರ್ಜೆಟ್ ಹಾಗೂ ಸಾದಾ ಮುದ್ರಿತ ಸೀರೆಗಳಿವೆ ಎಂದು ಭಾನುಪ್ರಕಾಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ, ಕೆಎಸ್‌ಐಸಿ ಮೈಸೂರು ಸಿಲ್ಕ್‌ನ ಸಿಬ್ಬಂದಿಗಳು, ಡಯಾನ ಹೋಟೇಲ್‌ನ ಮಾಲಕರಾದ ವಿಠಲ್ ೈ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಷಾ, ಕೆಎಸ್‌ಐಸಿ ಮೈಸೂರು ಸಿಲ್ಕ್‌ನ ಸಿಬ್ಬಂದಿಗಳು, ಡಯಾನ ಹೋಟೇಲ್‌ನ ಮಾಲಕರಾದ ವಿಠಲ್ ಪೈ ಮತ್ತಿತರರು ಉಪಸ್ಥಿತರಿದ್ದರು. ಈ ಪ್ರದರ್ಶನ ಡಿ.13ರವರೆಗೆ ಪ್ರತಿದಿನ ಬೆಳಗ್ಗೆ 10:00ರಿಂದ ಸಂಜೆ 8:00 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.

ಈ ಪ್ರದರ್ಶನ ಡಿ.13ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 8 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News