ಉಡುಪಿ ಪರ್ಯಾಯ ಸಿದ್ಧತೆ: ನಗರಸಭೆಯಲ್ಲಿ ಸಮಾಲೋಚನಾ ಸಭೆ

Update: 2019-12-10 14:23 GMT

ಉಡುಪಿ, ಡಿ.10:ಮುಂದಿನ ವರ್ಷ (2020) ಜ.18ರಂದು ನಡೆಯಲಿ ರುವ ಅದಮಾರು ಮಠದ ಪರ್ಯಾಯ ಮಹೋತ್ಸವದ ಕುರಿತು ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ನಗರಸಭೆಯಲ್ಲಿ ಅಧಿಕಾರಿಗಳು ಹಾಗೂ ಪರ್ಯಾಯ ಸಮಿತಿಯ ಪದಾಧಿಕಾರಿಗಳ ಸಭೆ ಸತ್ಯಮೂರ್ತಿ ಸಭಾಭವನದಲ್ಲಿ ಸೋಮವಾರ ನಡೆಯಿತು.

ಪರ್ಯಾಯ ಮಹೋತ್ಸವದ ಸಮಯದಲ್ಲಿ ಉಡುಪಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾಮಗಾರಿ, ಸ್ವಚ್ಛತೆ ಹಾಗೂ ಘನತ್ಯಾಜ್ಯ ವಸ್ತು ವಿಲೇವಾರಿ ಹಾಗೂ ಅವುಗಳ ಸೂಕ್ತ ನಿರ್ವಹಣೆ ಕುರಿತು ಸಭೆಯಲ್ಲಿ ಚರ್ಚೆಸಲಾಯಿತು.

ಶಾಸಕರು ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ರಸ್ತೆ ಗುಂಡಿಗಳನ್ನು ತುರ್ತಾಗಿ ಆದ್ಯತೆ ನೆಲೆಯಲ್ಲಿ ದುರಸ್ತಿಗೊಳಿಸುವಂತೆ ತಾಂತ್ರಿಕ ವಿಭಾಗಕ್ಕೆ ಸೂಚನೆಯನ್ನು ನೀಡಿದರು. ಪೌರಾಯುಕ್ತರು ಮತ್ತು ಅಭಿಯಂತರರು ಈಗಾಗಲೇ ಕೈಗೊಂಡ ಕ್ರಮದ ಬಗ್ಗೆ ಸಭೆಗೆ ವಿವರಿಸಿದರು.

ಶಾಸಕರು ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ರಸ್ತೆ ಗುಂಡಿಗಳನ್ನು ತುರ್ತಾಗಿ ಆದ್ಯತೆ ನೆಲೆಯಲ್ಲಿ ದುರಸ್ತಿಗೊಳಿಸುವಂತೆ ತಾಂತ್ರಿಕ ವಿಾಗಕ್ಕೆಸೂಚನೆಯನ್ನುನೀಡಿದರು.ಪೌರಾಯುಕ್ತರುಮತ್ತುಅಭಿಯಂತರರುಈಗಾಗಲೇಕೈಗೊಂಡಕ್ರಮದಬಗ್ಗೆಸೆಗೆ ವಿವರಿಸಿದರು. ನೈರ್ಮಲ್ಯ ಮತ್ತು ಘನತ್ಯಾಜ್ಯ ವಸ್ತುಗಳ ವಿಲೇವಾರಿಯ ಪ್ರಗತಿಯ ಬಗ್ಗೆ ಆರೋಗ್ಯ ವಿಾಗ ಮಾಹಿತಿ ನೀಡಿದರು.

 ಪೂರ್ವಭಾವಿ ಸಭೆಯಲ್ಲಿ ಪರ್ಯಾಯ ಮಹೋತ್ಸವ ಸಮಿತಿಯ ಸದಸ್ಯರು, ಪೌರಾಯುಕ್ತ ಆನಂದ ಸಿ. ಕಲ್ಲೋಳಿಕರ್, ನಗರಸಭೆಯ ಸಹಾಯಕ ಕಾರ್ಯಾಪಾಲಕ ಅಭಿಯಂತರರು (ಪ್ರಬಾರ), ಕಚೇರಿ ವ್ಯವಸ್ಥಾಪಕರು, ಅಭಿಯಂತರರು, ಆರೋಗ್ಯ ನಿರೀಕ್ಷಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News