ಆಸ್ಪತ್ರೆಯಲ್ಲಿ ಗುಂಡು ಹಾರಾಟ; 6 ಸಾವು

Update: 2019-12-10 17:17 GMT

 ಓಸ್ಟ್ರಾವ (ಝೆಕ್), ಡಿ. 10: ಝೆಕ್ ದೇಶದ ಪೂರ್ವದ ನಗರ ಓಸ್ಟ್ರಾವದಲ್ಲಿನ ಆಸ್ಪತ್ರೆಯೊಂದರಲ್ಲಿ ಬಂದೂಕುಧಾರಿಯೊಬ್ಬ ಮಂಗಳವಾರ ಗುಂಡಿನ ದಾಳಿ ನಡೆಸಿದ್ದು, ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆದ ಮೂರು ಗಂಟೆಗಳ ಬಳಿಕ, ನಾವು ಹುಡುಕುತ್ತಿದ್ದ ಕಾರಿನಲ್ಲಿ ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

‘‘ಪೊಲೀಸರು ಕಾರನ್ನು ಪತ್ತೆಹಚ್ಚಿದರು. ಕಾರಿನಿಂದ ಗುಂಡು ಹಾರಿಸಿದ ಶಬ್ದ ಕೇಳಿತು. ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಗುರುತು ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ’’ ಎಂದು ಪೊಲೀಸರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಹತ್ಯಾಕಾಂಡ ನಡೆಸಿದ ಬಳಿಕ ಬಂದೂಕುಧಾರಿಯು ತಪ್ಪಿಸಿಕೊಂಡಿದ್ದಾನೆ ಎಂದು ಇದಕ್ಕೂ ಮುನ್ನ ಪೊಲೀಸ್ ವಕ್ತಾರೆಯೊಬ್ಬರು ಸರಕಾರಿ ಒಡೆತನದ ಝೆಕ್ ಟೆಲಿವಿಶನ್‌ಗೆ ತಿಳಿಸಿದರು.

ರಾಜಧಾನಿ ಪ್ರೇಗ್‌ನ ಪೂರ್ವಕ್ಕೆ ಸುಮಾರು 300 ಕಿ.ಮೀ. ದೂರದಲ್ಲಿರುವ ಓಸ್ಟ್ರಾವದ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ಗುಂಡಿನ ದಾಳಿ ನಡೆಯಿತು ಎಂದು ಡಿಎನ್‌ಇಎಸ್ ಪತ್ರಿಕೆ ವರದಿ ಮಾಡಿದೆ.

ಹಂತಕನ ಕೃತ್ಯಕ್ಕೆ ಕಾರಣ ಗೊತ್ತಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News