ಸಿಖ್ ಉಬರ್ ಕಾರು ಚಾಲಕನ ಜನಾಂಗೀಯ ನಿಂದನೆ; ಹಲ್ಲೆ

Update: 2019-12-10 15:07 GMT

ವಾಶಿಂಗ್ಟನ್, ಡಿ. 10: ಅಮೆರಿಕದಲ್ಲಿ ಉಬರ್ ಕಂಪೆನಿಗೆ ಸೇರಿದ ಸಿಖ್ ಕಾರು ಚಾಲಕರೊಬ್ಬರನ್ನು ಪ್ರಯಾಣಿಕನೊಬ್ಬನು ಜನಾಂಗೀಯವಾಗಿ ನಿಂದಿಸಿ ಕುತ್ತಿಗೆ ಹಿಸುಕಿದ ಘಟನೆಯೊಂದು ವರದಿಯಾಗಿದೆ.

ವಾಶಿಂಗ್ಟನ್‌ನ ಕರಾವಳಿ ನಗರ ಬೆಲಿಂಗ್ಹಾಮ್‌ನಲ್ಲಿ ಡಿಸೆಂಬರ್ 5ರಂದು ಘಟನೆ ನಡೆದಿದೆ ಎಂದು ‘ಅಮೆರಿಕನ್ ಬಝಾರ್’ ಪತ್ರಿಕೆ ಸೋಮವಾರ ವರದಿ ಮಾಡಿದೆ.

ಪ್ರಯಾಣಿಕ 22 ವರ್ಷದ ಗ್ರಿಫಿನ್ ಲೆವಿ ಸೇಯರ್ಸ್ ಖರೀದಿಗೆ ಹೋಗಲು ನನ್ನ ಕಾರಿನಲ್ಲಿ ತೆರಳಿದ್ದಾನೆ ಹಾಗೂ ಕಾರು ಹತ್ತಿದ ಸ್ಥಳಕ್ಕೇ ಮರಳಿ ಬಂದಿದ್ದಾನೆ ಎಂದು ಚಾಲಕ ಪೊಲೀಸರಿಗೆ ಹೇಳಿದ್ದಾರೆ. ಅದೇ ಸ್ಥಳದಲ್ಲಿ ಗ್ರಿಫಿನ್ ನನ್ನನ್ನು ನಿಂದಿಸಿದನು ಹಾಗೂ ನನ್ನ ಗಂಟಲನ್ನು ಗಟ್ಟಿಯಾಗಿ ಅದುಮಿದನು ಎಂದು ಅವರು ಹೇಳಿದ್ದಾರೆ.

ಪ್ರಯಾಣಿಕನ ಹಿಡಿತದಿಂದ ಬಿಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಚಾಲಕ, ತುರ್ತು ಸಂಖ್ಯೆ 911ಕ್ಕೆ ಕರೆ ಮಾಡಿದರು. ಸ್ಥಳಕ್ಕೆ ಪೊಲೀಸರು ಬಂದಾಗ ಸಮೀಪದಲ್ಲೇ ಇದ್ದ ಗ್ರಿಫಿನ್‌ನನ್ನು ಬಂಧಿಸಿದರು ಎಂದು ‘ಅಮೆರಿಕನ್ ಬಝಾರ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News