×
Ad

ಇಂಗ್ಲೆಂಡ್‌ನಲ್ಲಿ ‘ಟ್ರಿಪಲ್ ತಲಾಖ್’ ಪ್ರದರ್ಶನ -ಸಂವಾದ

Update: 2019-12-10 20:51 IST

ಉಡುಪಿ, ಡಿ.10: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನೆಮಾ ನಿರ್ಮಾಪಕ ಯಾಕುಬ್ ಖಾದರ್ ಗುಲ್ವಾಡಿ ಮೊದಲ ಬಾರಿಗೆ ನಿರ್ದೇಶಿಸಿದ ‘ಟ್ರಿಪಲ್ ತಲಾಕ್’ ಬ್ಯಾರಿ ಭಾಷೆಯ ಚಲನಚಿತ್ರವು ಇಂಗ್ಲೆಂಡಿನ ನೈರುತ್ಯ ಕರಾವಳಿಯ ಬ್ರಿಸ್ಟನ್‌ನ ಸ್ಕಾಟ್ ಸಿನೆಮಾ ಮಂದಿರದಲ್ಲಿ ಡಿ.8ಂದು ಮೊದಲ ಪ್ರದರ್ಶನ ಕಂಡಿತು.

ಈ ಪ್ರದರ್ಶನಕ್ಕೆ ವಿಶೇಷ ಅತಿಥಿಯಾಗಿ ಭಾರತದ ಖ್ಯಾತ ಕ್ರಿಕೆಟಿಗ ಸದಾನಂದ ವಿಶ್ವನಾಥ್ ಅವರ ಸಹೊದರಿ ಸುಜಾತ ರಾವ್ ಆಗಮಿಸಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನಾಡಿ ಶುಭ ಹಾರೈಸಿದರು. ಸಿನೆಮಾ ಪ್ರದರ್ಶನದ ಬಳಿಕ ಚಿತ್ರಕಥೆ-ಸಂಭಾಷಣೆ-ನಿರ್ದೇಶನ ನೀಡಿರುವ ಯಾಕುಬ್ ಖಾದರ್ ಗುಲ್ವಾಡಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಜರಗಿತು.

ಬ್ರಿಸ್ಟನ್ ಕನ್ನಡಿಗರಾದ ಯೊಗೀಂದ್ರ ಮರವಂತೆ, ಹರೀಶ್ ತೋಟಿಗೆರಿ, ದುರ್ಗಪ್ಪ ಮೊಗೇರ್ ಸಹಕಾರ ನೀಡಿದರು. ಮುಂಬಯಿಯ ನಾರಾಯಣ ಪ್ರಭಾ ಸುವರ್ಣ ಈ ಸಿನೆಮಾದ ಸಹನಿರ್ಮಾಪಕರಾಗಿದ್ದಾರೆ. ಸುಮಾರು 25ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಸಿನೆಮಾದಲ್ಲಿ ರೂಪಾ ವರ್ಕಾಡಿ, ನವ್ಯಾ ಪೂಜಾರಿ, ಅಝರ್ ಷಾ, ರವಿಕಿರಣ್ ಮುರ್ಡೇಶ್ವರ, ಬೇಬಿ ಫಾತಿಮಾ, ಮಾಸ್ಟರ್ ಫಾಹದ್, ಮುಹಮ್ಮದ್ ಬಡ್ಡೂರು, ಎಂ.ಕೆ.ಮಾತಾ, ಎ.ಎಸ್. ಎನ್.ಹೆಬ್ಬಾರ್, ಹಂಝಾ ನಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News