ಅಂತರ್‌ರಾಜ್ಯ ಗಡಿಭಾಗದ ಆರ್‌ಎನ್‌ಟಿಸಿಪಿ ಸಭೆ

Update: 2019-12-10 16:01 GMT

ಮಂಗಳೂರು, ಡಿ.10: ಅಂತರ್ ರಾಜ್ಯದ ಗಡಿಭಾಗದ ಜಿಲ್ಲೆಗಳಾದ ಕಾಸರಗೋಡು ಮತ್ತು ಮಂಗಳೂರು ಇಲ್ಲಿಯ ಕ್ಷಯರೋಗಿಗಳ ಕುರಿತ ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದ (ಆರ್‌ಎನ್‌ಟಿಸಿಪಿ) ಸಭೆಯು ನಗರದ ಜಿಲ್ಲಾ ಕ್ಷಯರೋಗ ನಿಯಂತ್ರಣ ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಸಭೆಯಲ್ಲಿ ಕೇರಳ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಕ್ಷಯರೋಗಿಗಳಿಗೆ ನೀಡುತ್ತಿರುವ ಸೇವೆ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಜತೆಗೆ, ಚಿಕಿತ್ಸಾ ಸೇವೆಗಳನ್ನು ಸುಧಾರಿಸುವ ಬಗ್ಗೆಯೂ ಸುದೀರ್ಘ ಚರ್ಚೆ ನಡೆಯಿತು.

ಸಭೆಯಲ್ಲಿ ದ.ಕ. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದರುದ್ದೀನ್, ಕಾಸರಗೋಡು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಮೀನಾ, ಆರ್‌ಎನ್‌ಟಿಸಿಪಿ ಕೇರಳದ ಸಲಹೆಗಾರ ಡಾ.ರಾಕೇಶ್, ಕರ್ನಾಟಕ ಆರ್‌ಎನ್‌ಟಿಸಿಪಿ ಸಲಹೆಗಾರ ಶಾಝಿಯಾ ಅಂಜುಮ್, ಕಾಸರಗೋಡು ಡಿಟಿಸಿ ಕಿರಿಯ ಸಲಹೆಗಾರ ಡಾ.ನಾರಾಯಣ ಪ್ರದೀಪ್, ಮಂಗಳೂರು ವೆನ್ಲಾಕ್ ಡಿಟಿಸಿ ಸಲಹೆಗಾರ ಡಾ.ಶರತ್, ಡಾ.ಮಿಧುನ್, ಡಾ.ಸ್ವಾತಿ, ಮನೋಜ್ ಕೆ., ಹರ್ಷ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News