ಮೀನುಗಾರಿಕೆ: ಮೀನಿನ ಕನಿಷ್ಠ ಗಾತ್ರ ನಿಗದಿ

Update: 2019-12-10 16:06 GMT

ಮಂಗಳೂರು, ಡಿ.10: ಮೀನುಗಾರಿಕೆಯಲ್ಲಿ ದೊರೆತ ಸಣ್ಣ ಮೀನುಗಳನ್ನು ಫಿಶ್ ಮೀಲ್ ಪ್ಲಾಂಟ್/ ಸುರುಮಿ ಘಟಕಗಳಿಗೆ ಕಚ್ಛಾ ವಸ್ತುವಾಗಿ ಉಪಯೋಗಿಸಲಾಗುತ್ತಿದೆ. ಸಣ್ಣ ಮೀನುಗಳನ್ನು ಹಿಡಿಯುವುದರಿಂದ, ಮುಂದೆ ಮೀನಿನ ಸಂಪತ್ತು ಹೆಚ್ಚಳಕ್ಕೆ ತೊಂದರೆಯಾಗಿ ಮೀನಿನ ಉತ್ಪಾದನೆಯೂ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೀನಿನ ಕನಿಷ್ಠ ಕಾನೂನಾತ್ಮಕ ಗಾತ್ರವನ್ನು ಸರಕಾರ ನಿಗದಿಗೊಳಿಸಿದೆ.

ಮೀನಿನ ಕನಿಷ್ಠ ಗಾತ್ರದ ವಿವರ: ಬೂತಾಯಿ- 10 ಸೆಂ.ಮೀ., ಬಂಗುಡೆ- 14 ಸೆಂ.ಮೀ., ಪಾಂಬೊಲ್- 46 ಸೆಂ.ಮೀ., ಅಂಜಲ್ 50 ಸೆಂ.ಮೀ., ಕೊಲ್ಲತರು- 7 ಸೆಂ.ಮೀ., ಕಪ್ಪು ಮಾಂಜಿ- 17 ಸೆಂ.ಮೀ., ಕೇದಾರ್- 31 ಸೆಂ.ಮೀ., ಕಾಣೆ- 11.3 ಸೆಂ.ಮೀ., ಬೊಳೆಂಜಿರ್- 8.9 ಸೆಂ.ಮೀ., ಮದ್ಮಲ್- 12 ಸೆಂ.ಮೀ., ಡಿಸ್ಕೋ- 17 ಸೆಂ.ಮೀ., ಅಡೆಮೀನು- 10. ಸೆಂ.ಮೀ., ನಂಗು-9 ಸೆಂ.ಮೀ., ಬಿಳಿಮಾಂಜಿ- 13 ಸೆಂ.ಮೀ., ಮುರುಮೀನು-18 ಸೆಂ.ಮೀ., ಕಲ್ಲೂರು- 15 ಸೆಂ.ಮೀ., ಕೊಡ್ಡಾಯಿ- 17 ಸೆಂ.ಮೀ., ಕಪ್ಪೆ ಬಂಡಾಸ್-11 ಸೆಂ.ಮೀ. ಕನಿಷ್ಠ ಗಾತ್ರ ಹೊಂದಿರಬೇಕು.

ಆದೇಶವನ್ನು ಕಟ್ಟುನಿಟ್ಟಾಗಿ ಮೀನುಗಾರರು ಪಾಲಿಸಬೇಕು. ತಪ್ಪಿದಲ್ಲಿ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ ಯನ್ವಯ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದ.ಕ. ಜಿಲ್ಲಾ ಮೀನುಗಾರಿಕೆ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News