ಚೆಕ್ ಅಮಾನ್ಯ: ಆರೋಪಿಗಳಿಗೆ ಶಿಕ್ಷೆ

Update: 2019-12-10 16:29 GMT

ಮಂಗಳೂರು, ಡಿ.10: ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ವೈಯುಕ್ತಿಕ ಸಾಲ ಪಡೆಯುವಾಗ ನೀಡಿದ್ದ ಚೆಕ್ ಅಮಾನ್ಯಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್‌ನವರು ದಾಖಲಿಸಿದ್ದ ಪ್ರಕರಣ ಸಾಬೀತಾಗಿದ್ದು, ಉಪ್ಪಳದ ಗಣೇಶ ಶೆಟ್ಟಿ ಎಂಬವರಿಗೆ ಮಂಗಳೂರಿನ 5ನೇ ನ್ಯಾಯಾಲಯ 16,741 ರೂ. ದಂಡ ವಿಧಿಸಿದೆ.

ದಂಡದ ಮೊತ್ತದಲ್ಲಿ 15,741 ರೂ. ಸಂತ್ರಸ್ತರಿಗೆ ಪರಿಹಾರವಾಗಿ ನೀಡಬೇಕು. ದಂಡ ತೆರಲು ತಪ್ಪಿದರೆ ಆರು ತಿಂಗಳು ಸಾಮಾನ್ಯ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶೆ ದೀಪಾ ಅರಲಗುಂಡಿ ತೀರ್ಪು ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಯತಿರಾಜ್ ವಿರುದ್ಧ ಜೆಪ್ಪು ಚೆಕ್ ಅಮಾನ್ಯ ಆರೋಪ ಸಾಬೀತಾಗಿದೆ. ಆತನಿಗೂ 8,861 ರೂ. ದಂಡ ವಿಧಿಸಿದ್ದಾರೆ. ತಂಡ ತೆರಲು ತಪ್ಪಿದರೆ ಆರು ತಿಂಗಳು ಜೈಲು ವಾಸ ಅನುಭವಿಸಬೇಕು. ದಂಡದ ಮೊತ್ತದಲ್ಲಿ 8,361 ರೂ. ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಬ್ಯಾಂಕ್‌ನ ಪರವಾಗಿ ನ್ಯಾಯವಾದಿ ಚಿದಾನಂದ ಕೆದಿಲಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News