ಡಿ.17: ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

Update: 2019-12-11 06:33 GMT

ಬಂಟ್ವಾಳ : ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ದ.ಕ.ಜಿಲ್ಲಾ ಘಟಕ ಆಶ್ರಯದಲ್ಲಿ ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳ ಪರಿಹಾರ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ಮತ್ತು ಹಕ್ಕೊತ್ತಾಯ ಸಭೆ ಡಿ.17ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ನಡೆಸಲಿದೆ.

ಅಂಬೇಡ್ಕರ್ ವೃತ್ತದಿಂದ ಬೆಳಗ್ಗೆ 11 ಗಂಟೆಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೆರವಣಿಗೆ ಸಮಾವೇಶಗೊಳ್ಳಲಿದೆ ಎಂದು ಸಂಘದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಮಂಗಳವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈತರ ಬೇಡಿಕೆಗಳಾದ ಜಿಲ್ಲೆಯಲ್ಲಿ ಮಂಕಿಪಾರ್ಕ್, ನವಿಲು ಪಾರ್ಕ್ ನಿರ್ಮಾಣ, ಕರಾವಳಿಗೆ ಘೋಷಿಸಲಾದ ಪ್ಯಾಕೇಜ್ ಜಾರಿ, ಹವಾಮಾನ ಆಧರಿತ ಬೆಳೆವಿಮೆ ಪರಿಹಾರ ವಿತರಣೆ, ಹಾನಿಗೊಳಗಾದ ಕಾಳುಮೆಣಸು ಬಳ್ಳಿಗೆ ವೈಜ್ಞಾನಿಕ ಪರಿಹಾರ, 94ಸಿ, 94ಸಿಸಿ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಗೆ ತಕ್ಷಣ ಸಮಿತಿ ರಚನೆ, ರಬ್ಬರ್ ಬೆಳೆಗಾರರಿಗೆ ನೆರವು, ಬಂಟ್ವಾಳದಲ್ಲಿ ಸಕ್ರಿಯ ಎಪಿಎಂಸಿ ಮೊದಲಾದ ಮನವಿಗಳನ್ನು ಸಲ್ಲಿಸಲಾಗುವುದು ಎಂದವರು ಹೇಳಿದರು. ರೈತವಿರೋಧಿಯಾದ ಬ್ರೆಜಿಲ್ ದೇಶದ ಪ್ರಧಾನಿ ಬೊಲ್ಸನಾರೋ ಅವರನ್ನು ಗಣರಾಜ್ಯೋತ್ಸವಕ್ಕೆ ಪ್ರಧಾನಿ ಆಹ್ವಾನಿಸಿದ್ದು, ಇದನ್ನೂ ವಿರೋಧಿಸುವುದಾಗಿ ಅವರು ಹೇಳಿದರು.

ಕರ್ನಾಟಕ ರಾಜ್ಯ ರೈತಸಂಘ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫರ್ನನಾಂಡೀಸ್, ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಪೆರಾಬೆ, ಬಂಟ್ವಾಳ ತಾಲೂಕು ಘಟಕಾಧ್ಯಕ್ಷ ಪ್ರೇಮನಾಥ ಶೆಟ್ಟಿ ಬಾಳ್ತಿಲ, ಪ್ರಮುಖರಾದ ಅಲೆಕ್ಸ್ ರೋಡ್ರಿಗಸ್, ಸದಾನಂದ ಶೀತಲ್, ವಿವಿಯನ್ ಪಿಂಟೊ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

test@vb.in 

12

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News