ಪೌರತ್ವ ತಿದ್ದುಪಡಿ ಮಸೂದೆ ನಾಗರಿಕ ಹಕ್ಕುಗಳ ತಾರತಮ್ಯವಾಗಿದೆ: ರಿಯಾಝ್ ಫರಂಗಿಪೇಟೆ

Update: 2019-12-19 07:57 GMT

ಫರಂಗಿಪೇಟೆ : ಕೇಂದ್ರ ಸರಕಾರ ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಿದ ಪೌರತ್ವ ಮಸೂದೆಯ ವಿರುದ್ಧ ಎಸ್ಡಿಪಿಐ ವತಿಯಿಂದ ಮಸೂದೆಯ ಪ್ರತಿಗಳನ್ನು ಸುಟ್ಟು ಪ್ರತಿಭಟನಾ ಧರಣಿಯು ಫರಂಗಿಪೇಟೆಯಲ್ಲಿ ನಡೆಯಿತು.

ಈ  ಸಂದರ್ಭ ಮಾತನಾಡಿದ ಪಕ್ಷದ ರಾಜ್ಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಧರ್ಮದ ಆಧಾರದಲ್ಲಿ ವಿಭಜಿಸುವ  ಪೌರತ್ವ ಮಸೂದೆ ನಾಗರಿಕ ಹಕ್ಕುಗಳನ್ನು ನಿರಾಕರಿಸುವ ಸಂವಿಧಾನ ವಿರೋಧಿ ಮಸೂದೆಯಾಗಿದೆ ಇದನ್ನು ಬಹಿಷ್ಕರಿಸಬೇಕು ಎಂದು ಹೇಳಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್ಎಚ್ ಮಾತನಾಡಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ಅರ್ಪಣೆ ಮಾಡಿದ ಮುಸ್ಲಿಮರ ಪೌರತ್ವವನ್ನು ಪ್ರಶ್ನಿಸುವುದಾದರೆ ಪ್ರಜ್ಞಾವಂತ ನಾಗರಿಕರೆಲ್ಲರೂ ಇದನ್ನು ಬಹಿಷ್ಕರಿಸಬೇಕಾಗಿದೆ ಎಂದರು,  ಪ್ರತಿಭಟನನೆಯ ನೇತೃತ್ವವನ್ನು ಪಕ್ಷದ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಸುಲೈಮಾನ್ ಉಸ್ತಾದ್ ವಹಿಸಿದರು. ಅತಿಥಿಗಳಾಗಿ ಪಿಎಫ್ಐ ಫರಂಗಿಪೇಟೆ ವಲಯಾಧ್ಯಕ್ಷ ನಿಸಾರ್ ವಳವೂರ್, ಮುಖಂಡರಾದ ಲ್ಯಾನ್ಸಿ ತೊರೆಸ್, ಪುದು ಗ್ರಾಮ ಪಂ. ಸದಸ್ಯ ನಝೀರ್ ಹತ್ತನೆಮೈಲ್ ಕಲ್ಲು,  ಮಾಜಿ ಸದಸ್ಯ ಲೇತಿಫ್ ಐ ಉಪಸ್ಥಿತರಿದ್ದರು. ಶರೀಫ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News