ಅಮಿತ್ ಶಾ ವಿರುದ್ಧ ವಿಪಕ್ಷಗಳ ತೀವ್ರ ವಾಗ್ದಾಳಿ ವೇಳೆ ಪ್ರಸಾರ ನಿಲ್ಲಿಸಿದ ರಾಜ್ಯಸಭಾ ಟಿವಿ

Update: 2019-12-11 15:06 GMT

ಹೊಸದಿಲ್ಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆಯ ಮೇಲೆ ರಾಜ್ಯಸಭೆಯಲ್ಲಿ ಇಂದು ಕಾವೇರಿದ ಚರ್ಚೆ ನಡೆದ ಸಂದರ್ಭ ವಿಪಕ್ಷ ಸದಸ್ಯರು ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗಾಳಿ ನಡೆಸಿದ ಸಂದರ್ಭ ಕಲಾಪದ ನೇರ ಪ್ರಸಾರವನ್ನು ಸದನದ ಸಭಾಪತಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಆದೇಶದಂತೆ ಸ್ವಲ್ಪ ಸಮಯ ರಾಜ್ಯಸಭಾ ಟಿವಿ ತಡೆ ಹಿಡಿದ ಘಟನೆ ನಡೆದಿದೆ.

ಸರಕಾರ ಅಸ್ಸಾಂ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವ ಕುರಿತಾದ ಅಮಿತ್ ಶಾ ಹೇಳಿಕೆಗೆ ವಿಪಕ್ಷಗಳು ಅವರನ್ನು ಟಾರ್ಗೆಟ್ ಮಾಡಿದಾಗ ಕಲಾಪದ ನೇರ ಪ್ರಸಾರ ಸ್ಥಗಿತಗೊಂಡಿತು.

ಚರ್ಚೆಗೆ ಅಡ್ಡಿ ಪಡಿಸುವ ವಿಪಕ್ಷ  ಸದಸ್ಯರಿಗೆ ಎಚ್ಚರಿಕೆ ನೀಡಿದ ನಾಯ್ಡು ಸದಸ್ಯರು ಸದನದಿಂದ ಈ ದಿನದ ಮಟ್ಟಿಗೆ ಹೊರ ನಡೆಯುವಂತೆ ಮಾಡುವ ಸಲುವಾಗಿ ಅವರ ಹೆಸೆರೆತ್ತುವುದಾಗಿ ಹೇಳಿದರು. ಅಂತಹ ಸದಸ್ಯರು ಹೇಳಿದ ಯಾವುದೇ ಮಾತುಗಳು ದಾಖಲೆಯಲ್ಲಿ ಸೇರುವುದಿಲ್ಲ ಎಂದೂ ಅವರು ಹೇಳಿದರು.

ಕಲಾಪದ ನೇರ ಪ್ರಸಾರ ನಿಲ್ಲಿಸಲು ಸೂಚಿಸಲು ಸಭಾಪತಿ ಕೆಂಪು ಗುಂಡಿ ಒತ್ತುತ್ತಾರೆಂದು ತಿಳಿದು ಬಂದಿದೆ. ಸ್ವಲ್ಪ ಸಮಯದ ನಂತರ ಕಲಾಪದ ನೇರ ಪ್ರಸಾರ ಆರಂಭಗೊಂಡಾಗ ಎಲ್ಲವೂ ನಿಯಂತ್ರಣಕ್ಕೆ ಬಂದಂತಿತ್ತು ಹಾಗೂ ಕೇವಲ ಅಮಿತ್ ಶಾ ಮಾತನಾಡುತ್ತಿದ್ದುದು ಕಂಡು ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News