ಇಸ್ರೋದಿಂದ ಕಣ್ಗಾವಲು ಉಪಗ್ರಹ ರಿಸ್ಯಾಟ್-2ಬಿಆರ್1 ಯಶಸ್ವಿ ಉಡಾವಣೆ

Update: 2019-12-11 12:59 GMT

ಹೊಸದಿಲ್ಲಿ,ಡಿ.11: ಇಸ್ರೋ ತನ್ನ ಕಣ್ಗಾವಲು ಉಪಗ್ರಹ ರಿಸ್ಯಾಟ್-2ಬಿಆರ್1 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ 3.25ಕ್ಕೆ 44.4 ಮೀ.ಎತ್ತರದ ಪಿಎಸ್‌ಎಲ್‌ವಿ-ಸಿ48 ರಾಕೆಟ್ ಶುಭ್ರ ಆಗಸದ ಹಿನ್ನೆಲೆಯಲ್ಲಿ ರಿಸ್ಯಾಟ್ ಮತ್ತು ಇತರ ಒಂಭತ್ತು ವಿದೇಶಿ ಉಪಗ್ರಹಗಳನ್ನು ಹೊತ್ತುಕೊಂಡು ರಾಜಗಾಂಭೀರ್ಯದಿಂದ ನಭಕ್ಕೆ ಚಿಮ್ಮಿತು. ಇದು ಪಿಎಸ್‌ಎಲ್‌ವಿ ರಾಕೆಟ್ ಸರಣಿಯ 50ನೇ ಉಡ್ಡಯನವಾಗಿದೆ.

628 ಕೆ.ಜಿ.ತೂಕದ ರಿಸ್ಯಾಟ್-2ಬಿಆರ್1ಮುಖ್ಯವಾಗಿ ಮಿಲಿಟರಿ ಉದ್ದೇಶಗಳಿಗಾಗಿ ಕಾರ್ಯ ನಿರ್ವಹಿಸಲಿದೆ, ಜೊತೆಗೆ ಕೃಷಿ,ಅರಣ್ಯ ಮತ್ತು ವಿಕೋಪ ನಿರ್ವಹಣೆ ಇತ್ಯಾದಿಗಳಂತಹ ವಿವಿಧ ಕ್ಷೇತ್ರಗಳಿಗೂ ಅಗತ್ಯ ಮಾಹಿತಿಗಳನ್ನು ಒದಗಿಸಲಿದೆ. ರಿಸ್ಯಾಟ್‌ನೊಂದಿಗೆ ಬಾಹ್ಯಾಕಾಶಕ್ಕೆ ಚಿಮ್ಮಿದ ಒಂಭತ್ತು ಉಪಗ್ರಹಗಳ ಪೈಕಿ ಆರು ಅಮೆರಿಕಕ್ಕೆ ಮತ್ತು ತಲಾ ಒಂದು ಇಟಲಿ,ಜಪಾನ್ ಮತ್ತು ಇಸ್ರೇಲ್‌ಗೆ ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News