ಪತ್ರಕರ್ತರ ಬಂಧನ: ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ವರದಿ ಪ್ರಕಾರ ಈ ದೇಶ ನಂಬರ್ ವನ್

Update: 2019-12-11 17:36 GMT
   ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್, ಡಿ. 11: 2019ರಲ್ಲಿ ಚೀನಾವು ಕನಿಷ್ಠ 48 ಪತ್ರಕರ್ತರನ್ನು ಜೈಲಿಗೆ ಹಾಕಿದೆ. ಇದು ಇತರ ಯಾವುದೇ ದೇಶದಲ್ಲಿ ಬಂಧನಕ್ಕೊಳಗಾದ ಪತ್ರಕರ್ತರ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಬುಧವಾರ ಬಿಡುಗಡೆಯಾದ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ನ ವರದಿಯೊಂದು ತಿಳಿಸಿದೆ.

ಈ ವರ್ಷ ಜಗತ್ತಿನಾದ್ಯಂತ ಕನಿಷ್ಠ 250 ಪತ್ರಕರ್ತರನ್ನು ಜೈಲಿಗೆ ಹಾಕಲಾಗಿದೆ ಎಂದು ವರದಿ ಹೇಳಿದೆ. ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಕಮಿಟಿಯು ಪ್ರತಿ ವರ್ಷ ಈ ಮಾಹಿತಿಯನ್ನು ಸಂಗ್ರಹಿಸುತ್ತದೆ. ಕಳೆದ ವರ್ಷ 255 ಪತ್ರಕರ್ತರನ್ನು ಬಂಧಿಸಲಾಗಿತ್ತು.

ಚೀನಾದಲ್ಲಿ ಬಂಧಿತರಾದ ಪತ್ರಕರ್ತರ ಸಂಖ್ಯೆಯು ಕಳೆದ ವರ್ಷಕ್ಕಿಂತ ಒಂದು ಹೆಚ್ಚಾಗಿದೆ. ‘‘ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದೇಶದ ರಾಜಕೀಯ ನಿಯಂತ್ರಣವನ್ನು ಬಲಪಡಿಸಿಕೊಂಡ ಬಳಿಕ ಬಂಧಿತ ಪತ್ರಕರ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ವರದಿ ತಿಳಿಸಿದೆ.

ಎರಡನೇ ಸ್ಥಾನದಲ್ಲಿರುವ ಟರ್ಕಿ, 2019ರಲ್ಲಿ 47 ಪತ್ರಕರ್ತರನ್ನು ಬಂಧಿಸಿದೆ. ಕಳೆದ ವರ್ಷ ಅದು 68 ಪತ್ರಕರ್ತರನ್ನು ಬಂಧಿಸುವ ಮೂಲಕ ಮೊದಲ ಸ್ಥಾನದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News