ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನ ವಿರೋಧಿ: ಯು.ಟಿ.ಖಾದರ್

Update: 2019-12-19 05:12 GMT

ಮಂಗಳೂರು, ಡಿ.11: ಕೇಂದ್ರ ಸರಕಾರ ಪೌರತ್ವ ತಿದ್ದುಪಡಿ ಮಸೂದೆಯ ಮೂಲಕ ಜನವಿರೋಧಿ, ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಎಂದು ಶಾಸಕ ಹಾಗೂ ವಾಜಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರಕಾರದ ವಿರುದ್ಧ ದಿಲ್ಲಿಯ ರಾಮ್ ಲೀಲಾ ಮೈದಾನದಲ್ಲಿ ಎಐಸಿಸಿ ವತಿಯಿಂದ ಡಿ. 14ರಂದು ಹಮ್ಮಿಕೊಳ್ಳಲಾಗಿರುವ ‘ಭಾರತ್ ಬಚಾವೊ’ ರ್ಯಾಲಿಯಲ್ಲಿ ಜಿಲ್ಲೆಯ ಪ್ರತಿ ಬ್ಲಾಕ್‌ನಿಂದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರಕರಾವು ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಜತೆಗೆ ಸರಕಾರಿ ಸಂಸ್ಥೆಗಳನ್ನು ವಿದೇಶಿ ಕಂಪನಿಗಳಿಗೆ ಮಾರಾಟ ಮಾಡಲು ಯೋಜನೆ ರೂಪಿಸಿದೆ. ಖಾಸಗೀಕರಣ, ನಿರುದ್ಯೋಗ ಮೊದಲಾದ ವಿಷಯಗಳನ್ನು ಮುಂದಿಟ್ಟು ಈ ರ್ಯಾಲಿ ನಡೆಯಲಿದೆ. ಕೇಂದ್ರದ ಬಿಜೆಪಿ ಸರಕಾರದ ಆಡಳಿತ ವೈಫಲ್ಯ, ಕುಸಿಯುತ್ತಿರುವ ಜಿಡಿಪಿಯನ್ನು ಮರೆ ಮಾಚಲು ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಹೊರಟಿದೆ. ಮಹಾತ್ಮ ಗಾಂಧಿಯವರ ಭಾರತದ ಕಲ್ಪನೆ, ಅಂಬೇಡ್ಕರ್‌ರವರ ಸಂವಿಧಾನಕ್ಕೆ ವಿರುದ್ಧವಾಗಿ ಹಿಟ್ಲರ್ ಮಾದರಿಯ ಫ್ಯಾಸಿಸ್ಟ್ ಆಡಳಿತವನ್ನು ಕೇಂದ್ರ ಸರಕಾರದ್ದು. ದೇಶದ ಏಕತೆಗೆ, ಸಹೋದರತ್ವಕ್ಕೆ ಧಕ್ಕೆ ತರುವ ಈ ಮಸೂದೆಯನ್ನು ವಿರೋಧಿಸುವುದಾಗಿ ಅವರು ಹೇಳಿದರು.

ಉಪ ಚುನಾವಣೆಯ ಫಲಿತಾಂಶವು ಕಾಂಗ್ರೆಸ್ ಸೋಲಲ್ಲ. ಜನರ ತೀರ್ಪಿಗೆ ತಲೆಬಾಗುತ್ತೇವೆ. ಆದರೆ ಇದು ಜನತೆಯ ಸೋಲು. ಸುಪ್ರೀಂ ಕೋರ್ಟ್ ಅನರ್ಹರು ಎಂದು ಘೋಷಿಸಿದ ಬಳಿಕವೂ ಅವರನ್ನು ಆಯ್ಕೆ ಮಾಡಲಾಗಿದೆ. ಭವಿಷ್ಯದಲ್ಲಿ ಇದು ಮತದಾರರಿಗೆ ಅರಿವಾಗಲಿದೆ. ಜನತೆ ಪರಿತಪಿಸುವರು ಎಂದು ಯು.ಟಿ.ಖಾದರ್ ಹೇಳಿದರು.

ಗೋಷ್ಠಿಯಲ್ಲಿ ಚಂದ್ರಹಾಸ ಕರ್ಕೇರ, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ಮೋಹನ್ ಶೆಟ್ಟಿ, ಎನ್.ಎಸ್. ಕರೀಂ ಉಪಸ್ಥಿತರಿದ್ದರು.

ಉಳ್ಳಾಲ ದರ್ಗಾ ಪಾವಿತ್ರತೆ ಕಾಪಾಡುವುದು ಜಿಲ್ಲಾಡಳಿತದ ಹೊಣೆ

ಉಳ್ಳಾಲ ದರ್ಗಾ ಇತಿಹಾಸ ಪ್ರಸಿದ್ಧವಾದುದು. ಮಾತ್ರವಲ್ಲದೆ ದಕ್ಷಿಣ ಭಾರತದ ಅಜ್ಮೇರ್ ಎಂದೇ ಖ್ಯಾತಿಯನ್ನು ಪಡೆದಿದೆ. ಅದರ ಪಾವಿತ್ರತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯದ ಜತೆಗೆ ಜಿಲ್ಲಾಡಳಿತದ ಪ್ರಮುಖ ಹೊಣೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ಉಳ್ಳಾಲ ದರ್ಗಾ ವಿವಾದ ಕುರಿತು ಪ್ರತಿಕ್ರಿಯಿಸಿದರು.

ಸರಕಾರವು ಆಡಳಿತಾಧಿಕಾರಿ ನೇಮಕ ಮಾಡುವ ಸಂದರ್ಭ ಯಾರಲ್ಲೂ ಚರ್ಚಿಸಿಲ್ಲ. ಮಾಹಿತಿ ನೀಡಿಲ್ಲ. ಅದರ ಸರಿ ತಪ್ಪು ತೀರ್ಮಾನಿಸುವುದು ಕೋರ್ಟ್‌ಗೆ ಬಿಟ್ಟ ವಿಚಾರ. ಆದರೆ ಅಲ್ಲಿ ಶಾಂತಿ ಹಾಗೂ ಸೌಹಾರ್ದತೆಯ ಜತೆಗೆ ಸಹೋದರತೆಯನ್ನು ಕಾಪಾಡುವುದು ಜಿಲ್ಲಾಧಿಕಾರಿ ಕರ್ತವ್ಯ. ಕಳೆದ ಐದು ವರ್ಷಗಳಿಂದ ಅಲ್ಲಿ ಎರಡು ತಂಡಗಳ ನಡುವಿನ ವಿವಾದವನ್ನು ರಾಜೀ ಮೂಲಕ ಪರಿಹರಿಸಲು ಪ್ರಯತ್ನಿಸಿದ್ದೇನೆ. ಎರಡೂ ಸಮಿತಿಗಳ ಸದಸ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಆದರೆ ಅವರು ನ್ಯಾಯಾಲಯದ ಮೂಲಕ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಅಲ್ಲಿನ ತೀರ್ಮಾನದವರೆಗೆ ಅಲ್ಲಿ ಶಾಂತಿಯನ್ನು ಕಾಪಾಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News