​ಮೊಂಟೆಪದವು : ನೂತನ ಶಾಲಾ ಕಟ್ಟಡ ಉದ್ಘಾಟನೆ

Update: 2019-12-11 14:46 GMT

ಉಳ್ಳಾಲ: ಮೊಂಟೆಪದವು ಶಾಲೆಯನ್ನು ಈಗಾಗಲೇ ಪಿಯುಸಿಯವರೆಗೆ ವಿಸ್ತರಣೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕೊಠಡಿಗಳ ನಿರ್ಮಾಣ ಈಗಾಗಲೇ ಆಗಿದೆ. ಶಿಕ್ಷಣ ಕ್ಷೇತ್ರಕ್ಕಿರುವಷ್ಟು ಮಹತ್ವ ಬೇರೆ ಕ್ಷೇತ್ರಕ್ಕೆ ಇಲ್ಲ. ಶಿಕ್ಷಣದ ಪ್ರಮುಖ ಗುರಿ ಅಭಿವೃದ್ಧಿ. ಮಕ್ಕಳ ಬೆಳೆವಣಿಗೆ ಶಿಕ್ಷಣದಿಂದಲೇ ಆಗುತ್ತದೆ ಎಂದು ಶಾಸಕ ಯುಟಿ ಖಾದರ್ ಹೇಳಿದರು.

ಅವರು ಮೊಂಟೆಪದವುನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ನೂತನ ಕೊಠಡಿ ಉದ್ಘಾಟಿಸಿದ ಬಳಿಕ ಪ್ರತಿಭಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಈಗಾಗಲೇ ಒಂದು ಕೋಟಿ ರೂ. ವೆಚ್ಚದಲ್ಲಿ ಕೊಠಡಿ ನಿರ್ಮಾಣ ಹಂತದಲ್ಲಿದೆ. 30 ಲಕ್ಷ ರೂ. ವೆಚ್ಚದ ಕೊಠಡಿ ಪೂರ್ಣಗೊಂಡಿದೆ. ಮುಂದೆ ಶಾಲೆಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಕೂಡಾ ಒದಗಿಸಲಾಗುವುದು. ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ತಕ್ಕ ವ್ಯವಸ್ಥೆ ಕೂಡಾ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ  ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಜಿ.ಪಂ. ಸದಸ್ಯೆ ಮಮತಾಗಟ್ಟಿ, ಗ್ರಾ.ಪಂ. ಸದಸ್ಯ ಮುರಳಿ, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಜಲೀಲ್ ಮೋಂಟುಗೋಳಿ, ಯೋಗೀಶ್ ಆಚಾರ್ಯ, ಹನೀಫ್ ಚಂದಹಿತ್ಲು, ನಾಸಿರ್, ಪ್ರಶಾಂತ್ ಕಾಜವ, ಮಹೇಶ್, ಇಂಜಿನಿಯರ್ ರವಿ, ಉಪ ಪ್ರಾಂಶುಪಾಲ ಸಂತೋಷ್, ವಸಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News