ಮುಡಿಪು: ಕುಡಿಯುವ ನೀರಿನ ಘಟಕ ಉದ್ಘಾಟನೆ

Update: 2019-12-11 14:49 GMT

ಉಳ್ಳಾಲ : ಮುಡಿಪು ಅಭಿವೃದ್ಧಿ ಕಡೆ ಹೆಜ್ಜೆ ಹಾಕುತ್ತಿದ್ದು, ಇಲ್ಲಿನ ಜನರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆ ಆರಂಭಿಸಲಾಗಿದೆ. ಮುಡಿಪು ಪ್ರದೇಶದಲ್ಲಿ ಆಸ್ಪತ್ರೆ, ಶಾಲಾ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದರಿಂದ ಇಲ್ಲಿಗೆ ಶುದ್ಧ ಕುಡಿಯುವ ನೀರಿನ ಯೋಜನೆ ಆರಂಭಿಸಲಾಗಿದೆ. 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಘಟಕದ ಮುಂದಿನ ಕಾರ್ಯವನ್ನು ಪಂಚಾಯತ್ ನೋಡಲಿದ್ದು, ಪಂಚಯತ್‍ಗೆ ಮೂರು ಸಾವಿರ ತಿಂಗಳಿಗೆ ನೀಡಲಾಗುವುದು ಎಂದು ಶಾಸಕ ಖಾದರ್ ಹೇಳಿದರು.

ಅವರು ಮುಡಿಪುವಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಜಿ.ಪಂ. ಉಪಾಧ್ಯಕ್ಷ ಕಸ್ತೂರಿ ಪಂಜಾ ಮಾತನಾಡಿ, ಶುದ್ಧಕುಡಿಯುವ ನೀರಿನ ಘಟಕ ಮುಡಿಪುವಿಗು ವಿಸ್ತರಣೆ ಮಾಡಲಾಗಿದೆ. ಸರಕಾರ ಎಲ್ಲಾ ಜಿಲ್ಲೆಗಳಿಗೆ ಈ ವ್ಯವಸ್ಥೆ ಮಾಡುತ್ತದೆ. ವ್ಯವಸ್ಥೆ ಮಾಡುವ ಮುನ್ನ ಅಗತ್ಯ ಇದೆಯಾ ಎಂದು ನೋಡಬೇಕು. ಅಗತ್ಯ ಇರುವ ಕಡೆಗೆ ಮಾತ್ರ ವ್ಯವಸ್ಥೆ ಮಾಡಬೇಕಾಗುತ್ತದೆ. ಒಂದು ಲೀ. ನೀರಿಗೆ 20 ರೂ. ಕೊಡಬೇಕು. ಐದು ರೂ. 10 ಲೀ. ಕುಡಿಯುವ ನೀರು ಸಿಗುತ್ತದೆ. ಜನರಿಗೆ ಇದರಿಂದ ಬಹಳಷ್ಟು ಅನುಕೂಲ ಆಗುತ್ತದೆ ಎಂದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಮಮತಾಗಟ್ಟಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ, ಸದಸ್ಯ ಹೈದರ್ ಕೈರಂಗಳ, ಜಲೀಲ್ ಮೋಂಟುಗೋಳಿ, ಕುರ್ನಾಡು ಗ್ರಾ.ಪಂ. ಅಧ್ಯಕ್ಷ ಶೈಲಜಾ, ಸದಸ್ಯ ನವೀನ್, ಅಭಿವೃದ್ಧಿ ಅಧಿಕಾರಿ ಕೇಶವ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ನರೇಂದ್ರ ಬಾಬು, ಸಿದ್ದೀಕ್ ಪಾರೆ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News