×
Ad

ಪುತ್ತೂರು : ನೀರಿನ ಟಾಂಕಿಗೆ ಬಿದ್ದು ಮಹಿಳೆ ಸಾವು

Update: 2019-12-11 20:30 IST

ಪುತ್ತೂರು : ಮಹಿಳೆಯೊಬ್ಬರು ಮನೆಯ ಪಕ್ಕದಲ್ಲಿರುವ ನೀರಿನ ಟಾಂಕಿಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ನಗರದ ಹೊರವಲಯದ ಸೂತ್ರಬೆಟ್ಟು ಸಮೀಪದ ಆಶ್ರಯ ಕಾಲನಿಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.

ಸೂತ್ರಬೆಟ್ಟು ಆಶ್ರಯ ಕಾಲನಿಯ ನಿವಾಸಿ, ಪುತ್ತೂರಿನ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಡಿ.ಗ್ರೂಪ್ ನೌಕರೆಯಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ದೇವಮ್ಮ (59) ಮೃತಪಟ್ಟ ಮಹಿಳೆ.

ಲಕ್ಷ್ಮೀ ದೇವಮ್ಮ ಅವರು ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಅವರ ಮೃತದೇಹ ಮನೆಯ ವಠಾರದಲ್ಲಿದ್ದ ನೀರಿನ ಟಾಂಕಿಯಲ್ಲಿ ಪತ್ತೆಯಾಗಿದೆ. ಮನೆಯ ವಠಾರದಲ್ಲಿರುವ ಹೂವಿನ ಗಿಡಗಳಿಗೆ ನೀರು ಹಾಕುತ್ತಿದ್ದ ವೇಳೆ ಅವರು ಆಕಸ್ಮಿಕವಾಗಿ ಆಯತಪ್ಪಿ ನೀರಿನ ಟಾಂಕಿಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News