ಮಲೇಶಿಯಾದಲ್ಲಿ ಪದಕ ವಿಜೇತ ಮಾಸ್ಟರ್ಸ್‌ ಅಥ್ಲೆಟ್ಸ್ ತಂಡದ ಸದಸ್ಯರಿಗೆ ಸನ್ಮಾನ

Update: 2019-12-11 16:12 GMT

ಮಂಗಳೂರು, ಡಿ.11 : ಮಲೇಶಿಯಾದಲ್ಲಿ ಡಿ.2ರಿಂದ 7ರವರೆಗೆ ನಡೆದ 21 ಏಶಿಯನ್ ಮಾಸ್ಟರ್ಸ್‌ ಅಥ್ಲೆಟ್ ಚ್ಯಾಂಪಿಯನ್ ಶಿಫ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕ ವಿಜೇತರಾದ ದಕ್ಷಿಣ ಕನ್ನಡ ಜಿಲ್ಲಾ ಮಾಸ್ಟರ್ಸ್‌ ಅಥ್ಲೆಟ್ ಅಸೊಶಿಯೇಶನ್ ವತಿಯಿಂದ ಅವರಿಗೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಸನ್ಮಾನ ಕಾರ್ಯಕ್ರಮ ನಡೆಯಿತು.

ಜಿಲ್ಲೆಯಿಂದ ಭಾಗವಹಿಸಿದ ಒಟ್ಟು ಹತ್ತು ಮಂದಿಯಲ್ಲಿ 5 ಮಂದಿ 5 ಚಿನ್ನ 4 ಬೆಳ್ಳಿ ಹಾಗೂ 4 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಪದಕ ಪಡೆದ ಮೇರಿ ಹೀಲ್ಡಾ ಡಿ ಸೋಜ, ಗ್ಲಾಡಿಸ್ ಫಾಯಸ್, ಸುಬ್ರಹ್ಮಣ್ಯ ಆಚಾರ್ಯ, ಗಿರಿಧರ ಸಾಲ್ಯಾನ್, ಶೋಭಾ ಪದಕ ಗಳಿಸಿದ ಕ್ರೀಡಾ ಪಟುಗಳನ್ನು ಜಿಲ್ಲಾ ಕ್ರೀಡೆ ಮತ್ತು ಯುವಜನ ಸಬಲೀಕರಣ ಇಲಾಖೆಯ ಉಪ ನಿರ್ದೇಶಕರಾದ ಪ್ರದೀಪ್ ಡಿಸೋಜ ಸನ್ಮಾನಿಸಿದರು.

ಈ ಸಂದರ್ಭ ಜಿಲ್ಲಾ ಮಾಸ್ಟರ್ಸ್‌ ಅಸೋಶಿಯೇಶನ್‌ನ ಪದಾಧಿಕಾರಿಗಳಾದ ಸದಾನಂಧ ಪ್ರಭು, ಲಕ್ಷ್ಮಣ, ಮಹಾಬಲ ಶೆಟ್ಟಿ ಸದಾನಂದ ಆಳ್ವಾ, ಸಹನಾ, ಅಬ್ದುಲ್ ರಹಿಮಾನ್, ಸುಭಾಶ್ಚಂದ್ರ ರೈ, ಗಿರಿಧರ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News