ಸೋನಿಯಾಗಾಂಧಿ ಜನ್ಮದಿನ : ವೆನ್ಲಾಕ್ ರೋಗಿಗಳಿಗೆ ಉಪಹಾರ ವಿತರಣೆ

Update: 2019-12-11 16:18 GMT

 ಮಂಗಳೂರು, ಡಿ.11: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜನ್ಮದಿನ ಪ್ರಯುಕ್ತ ಯುವ ಕಾಂಗ್ರೆಸ್‌ನ ಸೌಹಾನ್ ಎಸ್.ಕೆ., ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ನೇತೃತ್ವದಲ್ಲಿ ‘ಎಂ-ಫ್ರೆಂಡ್ಸ್ ಕಾರುಣ್ಯ ಯೋಜನೆ’ ಸಹಯೋಗದೊಂದಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಉಪಹಾರ ವಿತರಿಸಲಾಯಿತು.

ಈ ಸಂದರ್ಭ  ಶಾಂತಲಾ ಗಟ್ಟಿ, ನವಾಜ್ ಜೆಪ್ಪು, ರಮಾನಂದ್ ಪೂಜಾರಿ, ಅನ್ಸಾರುದ್ದೀನ್ ಸಾಲ್ಮರ, ಸಮರ್ಥ್ ಭಟ್, ಪ್ರದೀಪ್ ಬೇಕಲ್, ಹಾಶಿರ್ ಪೆರಿಮಾರ್, ಶ್ರೇಯಸ್ ಭಟ್, ಸವಾದ್ ಸುಳ್ಯ, ಹಿಷಾಮ್ ಜೋನ್, ಪ್ರಶಾಂತ್ ಬಶೀರ್ ಮತ್ತು ಮುಸ್ತಫ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News