ಉಡುಪಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ

Update: 2019-12-19 05:12 GMT

ಉಡುಪಿ, ಡಿ.11: ಕೇಂದ್ರ ಸರಕಾರ ಮಂಡಿಸಿರುವ ಪೌರತ್ವ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಇಂದು ಎಸ್‌ಐಓ ಉಡುಪಿ, ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ, ವೆಲ್ಪೇರ್ ಪಾರ್ಟಿ ಉಡುಪಿ, ದಲಿತ ದಮನಿತ ಹೋರಾಟ ಸಮಿತಿ ಉಡುಪಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಗಳ ವತಿಯಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸಂಯುಕ್ತ ವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಜಿ. ರಾಜಶೇಖರ್,ಈ ಮಸೂದೆಯಲ್ಲಿ ಮುಸ್ಲಿಮ್ ಸಮುದಾಯ ವನ್ನು ಹೊರಗಿಟ್ಟು ಜಾರಿಗೆ ತರುವ ಪ್ರಯತ್ನ ಸಾಗಿದೆ. ಅಮಿತ್ ಶಾರ ಮಕ್ಕಳಾಟಿಕೆಯ ತರ್ಕದ ಪ್ರಕಾರ ಈ ದೇಶಗಳು ಮುಸ್ಲಿಮ್ ರಾಷ್ಟ್ರಗಳಾಗಿರುವುದರಿಂದ ಮುಸ್ಲಿಮರು ದೌರ್ಜನ್ಯಕ್ಕೆ ಒಳಗಾಗುವುದಿಲ್ಲವೆಂಬ ವಾದ ಮಂಡಿಸುತ್ತಾರೆ. ಆದರೆ ವಾಸ್ತವ ದಲ್ಲಿ ಕಡು ಬಡತನದ ಕಾರಣ ಮುಸ್ಲಿಮರು ಭಾರತಕ್ಕೆ ಉದ್ಯೋಗ ಅರಸಿ ಬರುತ್ತಾರೆ. ಭಾರತ ಅವರಿಗೆಲ್ಲ ನೆಲೆ ನೀಡಬೇಕು ಎಂದರು.

ಮಯನ್ಮಾರ್ ದೇಶದಲ್ಲಿ ರೋಹಿಂಗ್ಯಾ ಮುಸ್ಲಿಮರು ದೌರ್ಜನ್ಯ ಅನುಭವಿ ಸುತಿದ್ದಾರೆ. ಅವರ ಬಗ್ಗೆ ಶಾರ ಅಭಿಪ್ರಾಯವೇನು ಎಂದು ಪ್ರಶ್ನಿಸಿದ ರಾಜಶೇಖರ್, ಶ್ರೀಲಂಕಾದ ತಮಿಳು ಹಿಂದುಗಳ ಬಗ್ಗೆ ಈ ಮಸೂದೆಯಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ಈ ಮಸೂದೆ ಭಾರತದ ಸಂವಿಧಾನಕ್ಕೆ, ಧರ್ಮ ನಿರಪೇಕ್ಷತೆಗೆ ಮಸಿ ಬಳಿಯು ಹುನ್ನಾರವಾಗಿದೆ ಎಂದು ಆರೋಪಿಸಿದರು.

ಪೌರತ್ವ ತಿದ್ದುಪಡಿ ಮಸೂದೆಯ ಉದ್ದೇಶ ಮುಸ್ಲಿಮರು ಈ ದೇಶದ ಪ್ರಜೆಗಳಲ್ಲ, ಮನುಷ್ಯರೂ ಅಲ್ಲ ಎಂಬ ನಿಲುವಾಗಿದೆ. ಅಮಿತ್ ಶಾ ಮತ್ತು ಮೋದಿಯ ಕರಾಳ ಹಿನ್ನಲೆಯಲ್ಲಿ ಮಂಡಿಸಿರುವ ಈ ಮಸೂದೆಯನ್ನು ನಾವು ಒಗ್ಗಟ್ಟಾಗಿ ಬಹಿಷ್ಕರಿಸಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಐಓ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಈ ಮಸೂದೆಯನ್ನು ಮಂಡಿಸಿ ಕೇಂದ್ರ ಸರಕಾರ ದೇಶದ ಸಂವಿಧಾನದ ಆತ್ಮದ ಮೇಲೆ ದಾಳಿ ಮಾಡಿದೆ. ಪೌರತ್ವ ತಿದ್ದುಪಡಿ ಮಸೂದೆಯು ಸಂವಿಧಾನದ ಮೂಲ ಆಶಯಗಳನ್ನು ನಿರಾಕರಿಸಿ ಜಾರಿಗೆ ತರುವ ಪ್ರಯತ್ನ ನಡೆದಿದೆ. ಇದು ಕೇವಲ ಮುಸ್ಲಿಮರ ವಿರುದ್ಧ ಅಲ್ಲ, ಬದಲಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕನ ವಿರುದ್ದ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್‌ಐಓ ರಾಜ್ಯ ಕಾರ್ಯದರ್ಶಿ ಯಾಸೀನ್ ಕೋಡಿಬೆಂಗ್ರೆ, ಈ ಮಸೂದೆಯನ್ನು ಮಂಡಿಸಿ ಕೇಂದ್ರ ಸರಕಾರ ದೇಶದ ಸಂವಿಾನದಆತ್ಮದಮೇಲೆದಾಳಿಮಾಡಿದೆ.ಪೌರತ್ವತಿದ್ದುಪಡಿಮಸೂದೆಯುಸಂವಿಾನದ ಮೂಲ ಆಶಯ ಗಳನ್ನು ನಿರಾಕರಿಸಿ ಜಾರಿಗೆ ತರುವ ಪ್ರಯತ್ನ ನಡೆದಿದೆ. ಇದು ಕೇವಲ ಮುಸ್ಲಿಮರ ವಿರುದ್ಧ ಅಲ್ಲ, ಬದಲಾಗಿ ಈ ದೇಶದ ಪ್ರತಿಯೊಬ್ಬ ನಾಗರಿಕನ ವಿರುದ್ದ ಎಂದು ಅಭಿಪ್ರಾಯ ಪಟ್ಟರು. ಇಂತಹ ಸಂವಿಧಾನ ಬಾಹಿರ ಕಾನೂನನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಈ ಮಸೂದೆಯು ದೇಶದ ಜನತೆಯನ್ನು ಧರ್ಮಾಧಾರಿತವಾಗಿ ವಿಭಜಿಸುವ ಷಡ್ಯಂತ್ರದ ಭಾಗವಾಗಿದೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಷ್ಟ್ರ ಸಮಿತಿಯ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಈ ದೇಶ ಜಾತ್ಯತೀತ ತಳಹಾದಿಯಲ್ಲಿ ನೆಲೆ ನಿಂತ ದೇಶವಾಗಿದೆ. ಇಲ್ಲಿ ಧಾರ್ಮಿಕ ಸ್ವಾತಂತ್ರ್ಯವಿದೆ. ನಿಮ್ಮ ಆರಾಧನೆಯನ್ನು ನಿಮ್ಮ ಮನೆಯಲ್ಲಿ ಟ್ಟುಕೊಳ್ಳಿ. ಈ ದೇಶದ ದೇವರು ನಮ್ಮ ರಾಷ್ಟ್ರ ಧ್ವಜ ಮತ್ತು ನಮ್ಮ ಗ್ರಂಥ ಸಂವಿಧಾನವಾಗಿದೆ ಎಂದರು.

ಈ ಸಂದರ್ಭದಲ್ಲಿ ಇದ್ರಿಸ್ ಹೂಡೆ, ಅಝೀಜ್ ಉದ್ಯಾವರ ಮಾತನಾಡಿದರು. ಪ್ರತಿಭಟನೆಯಲ್ಲಿ ವಿಠಲ ತೊಟ್ಟಂ, ಶಬ್ಬೀರ್ ಮಲ್ಪೆ, ಎಸ್‌ಐಓ ಜಿಲ್ಲಾಧ್ಯಕ್ಷ ಅಘ್ವಾನ್ ಹೂಡೆ, ಶಾರೂಕ್ ತೀರ್ಥಹಳ್ಳಿ, ಅಮ್ನಾ ಕೌಸರ್, ಅಬ್ದುಲ್ ಖಾದೀರ್ ಹೂಡೆ, ಮುನೀರ್ ಅಹ್ಮದ್, ರಫೀಕ್ ಕಲ್ಯಾಣಪುರ, ಖತೀಬ್ ರಶೀದ್ ಮಲ್ಪೆ, ಮೆಹರುನ್ನಿಸಾ, ನಿಸಾರ್ ಉಡುಪಿ, ರಶೀದ್ ಮಲ್ಪೆ ಮುಂತಾದವರು ಉಪಸ್ಥಿತರಿದ್ದರು.

ಹುಸೇನ್ ಕೋಡಿಬೇಂಗ್ರೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕೊನೆಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮಸೂದೆ ತಿರಸ್ಕರಿಸುವಂತೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News