ಕೆಎಂಎಫ್ ಉಪ್ಪೂರು ಘಟಕಕ್ಕೆ ಡಾ.ಹೆಗ್ಗಡೆ ಭೇಟಿ

Update: 2019-12-11 16:23 GMT

ಉಡುಪಿ, ಡಿ.11: ದಕ್ಷಿಣ ಕನ್ನಡ ಹಾಲು ಒಕ್ಕೂಟವು ತನ್ನ ವಿನೂತನ ಯೋಜನೆಗಳಿಂದ ಉತ್ತಮ ಗುಣಮಟ್ಟದ ಹಾಲು ಹಾಗೂ ಹಾಲಿನ ಉತ್ಪನ್ನ ಗಳನ್ನು ಗ್ರಾಹಕರಿಗೆ ಪೂರೈಸುತಿದ್ದು, ಅನೇಕ ಹೈನುಗಾರರ ಬೆನ್ನೆಲುಬಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಈ ಪ್ರಯತ್ನಕ್ಕೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಶುಭ ಹಾರೈಸಿದ್ದಾರೆ.

ಉಪ್ಪೂರಿನಲ್ಲಿರುವ ದ.ಕ.ಹಾಲು ಒಕ್ಕೂಟದ ಉಡುಪಿ ಡೇರಿ ಘಟಕಕ್ಕೆ ಇಂದು ಭೇಟಿ ನೀಡಿದ ಅವರು, ಡೇರಿ ಘಟಕವನ್ನು ಪರಿವೀಕ್ಷಿಸಿದರು. ಒಕ್ಕೂಟದ ಆಡಳಿತ ಮಂಡಳಿ ಹಾಗೂ ನೌಕರ ವರ್ಗ ಧರ್ಮಾಧಿಕಾರಿಗನ್ನು ಸಂಭ್ರಮದಿಂದ ಸ್ವಾಗತಿಸಿತು.
ಉಡುಪಿ ಡೇರಿಯ ಕಾರ್ಯವೈಖರಿ ಹಾಗೂ ಸ್ವಚ್ಛತೆಯ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ನಡೆದ ಸಂಕ್ಷಿಪ್ತ ಕಾರ್ಯಕ್ರಮದಲ್ಲಿ ಅವರನ್ನು ಒಕ್ಕೂಟದ ವತಿಯಿಂದ ಗೌರವಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ನಿರ್ದೇಶಕರಾದ ಕೆ.ಪಿ.ಸುಚರಿತ ಶೆಟ್ಟಿ ವಂದಿಸಿದರು. ಸಹಾಯಕ ವ್ಯವಸ್ಥಾಪಕ ಸುಧಾಕರ್ ಕಾರ್ಯಕ್ರಮ ನಿರೂಪಿಸಿದರು.

ಒಕ್ಕೂಟದ ನಿದೇರಾದ ಜಗದೀಶ್ ಕಾರಂತ್, ಹದ್ದೂರು ರಾಜೀವ್ ಶೆಟ್ಟಿ, ಪದ್ಮನಾಭ ಶೆಟ್ಟಿ ಅರ್ಕಜೆ , ಸಾಣೂರು ನರಸಿಂಹ ಕಾಮತ್, ಸ್ಮಿತಾ ಶೆಟ್ಟಿ, ಸುಭದ್ರಾ ರಾವ್, ಸುಧಾಕರ ಶೆಟ್ಟಿ, ಸುಧಾಕರ ರೈ, ಸವಿತಾ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ.ಹೆಗ್ಡೆ, ಉಪ ವ್ಯವಸ್ಥಾಪಕ ಡಾ.ರಾಮಕೃಷ್ಣ ಭಟ್, ಡಾ.ಮನೋಹರ್, ಡಾ.ಅನಿಲ್ಕುಮಾರ್ ಶೆಟ್ಟಿ, ಟಿ.ಲಕ್ಕಪ್ಪ, ಮುನಿರತ್ನಮ್ಮ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News