ತಾಯಿ-ಮಗು ನಾಪತ್ತೆ

Update: 2019-12-11 16:48 GMT

ಮಂಗಳೂರು, ಡಿ.11: ಶಕ್ತಿನಗರದ ಪದವು ನೀತಿನಗರ ನಿವಾಸಿ ಸರಿತಾ ಸಿಂಗ್ (32) ತನ್ನ ಪುತ್ರ ಅಭಿಷೇಕ್ (7)ನೊಂದಿಗೆ ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪತಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಇವರು ನಾಪತ್ತೆಯಾಗಿದ್ದು, ಮನೆಯಲ್ಲಿರುವ ಬಟ್ಟೆ ಬರೆ, ಮಗುವಿನ ಪುಸ್ತಕ, ಬ್ಯಾಗ್ ಹಾಗೂ ಆಭರಣಗಳನ್ನು ತೆಗೆದುಕೊಂಡು ಎಲ್ಲಿಯೋ ಹೋಗಿದ್ದಾರೆ. ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಹರೆ: ಸರಿತಾ ಸಿಂಗ್ 5.3 ಅಡಿ ಎತ್ತರ, ಗೋಧಿ ಮೈ ಬಣ್ಣ, ದಪ್ಪ ಶರೀರ, ಕನ್ನಡ, ಹಿಂದಿ ಮಾತನಾಡುತ್ತಾರೆ. ಅಭಿಷೇಕ್ 3 ಅಡಿ ಎತ್ತರ, ಗೋಧಿ ಮೈ ಬಣ್ಣ, ಉರುಟು ಮುಖ ಹೊಂದಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ.

ನಾಪತ್ತೆಯಾದವರ ಮಾಹಿತಿ ಲಭಿಸಿದರೆ ಕಂಕನಾಡಿ ನಗರ ಠಾಣೆ (0824-2220529) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News