ಇದು ಗ್ರೆಟಾ ಸಿನಮಾ ನೋಡುವ ಸಮಯ: ಟ್ರಂಪ್

Update: 2019-12-12 15:39 GMT

ವಾಶಿಂಗ್ಟನ್, ಡಿ. 12: ಪರಿಸರ ಹೋರಾಟಗಾರ್ತಿ ಗ್ರೆಟಾ ತನ್ ಬರ್ಗ್‌ರನ್ನು ಟೈಮ್ ಮ್ಯಾಗಝಿನ್ 2019ರ ವರ್ಷದ ವ್ಯಕ್ತಿಯನ್ನಾಗಿ ನೇಮಿಸಿರುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಗ್ರೆಟಾ ತಿರುಗಾಡಿ, ಸಿನೆಮಾ ನೋಡಿ ಕಾಲ ಕಳೆಯುವ ಸಮಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಇದು ಅತ್ಯಂತ ಹಾಸ್ಯಾಸ್ಪದ. ಮೊದಲು ಗ್ರೆಟಾ ತನ್ನ ಸಿಟ್ಟನ್ನು ನಿಭಾಯಿಸುವುದನ್ನು ಕಲಿತುಕೊಳ್ಳಬೇಕು. ಬಳಿಕ, ಸ್ನೇಹಿತನ ಜೊತೆಗೆ ಹಳೆಯ ಶೈಲಿಯ ಉತ್ತಮ ಚಿತ್ರವೊಂದನ್ನು ನೋಡಲು ಹೋಗಬೇಕು! ಆರಾಮವಾಗಿರು ಗ್ರೆಟಾ, ಆರಾಮವಾಗಿರು (ಚಿಲ್)’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News