ಉಡುಪಿ: ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಿಲಾನ್ಯಾಸ

Update: 2019-12-13 15:10 GMT

ಉಡುಪಿ, ಡಿ.13: 2019-20ನೇ ಸಾಲಿನ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಪ್ರವಾಹ ನಿಯಂತ್ರಣ ಕಾಮಗಾರಿಗಳ ಶಿಲಾನ್ಯಾಸವನ್ನು ಶಾಸಕ ಕೆ.ರಘುಪತಿ ಭಟ್ ವಿವಿದೆಡೆಗಳಲ್ಲಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು, ಕಲ್ಮಾಡಿ ನಗರಸಭೆಯ ಸದಸ್ಯ ಸುಂದರ್ ಕಲ್ಮಾಡಿ, ಕೊಡವೂರು ನಗರಸಭಾ ಸದಸ್ಯ ವಿಜಯ ಕೊಡವೂರು, ಮೂಡುಬೆಟ್ಟು ನಗರಸಭೆಯ ಸದಸ್ಯ ಶ್ರೀಶಭಟ್ ಮೂಡುಬೆಟ್ಟು, ಬಡಾನಿಡಿಯೂರು ಗ್ರಾಪಂ ಅಧ್ಯಕ್ಷ ಉಮೇಶ್ ಪೂಜಾರಿ, ಸದಸ್ಯರಾದ ನವೀನ್, ಕೃಷ್ಣ, ವಿಶು ಕಲ್ಯಾಣಪುರ, ಸತೀಶ್, ಪೆರಂಪಳ್ಳಿ ನಗರಸಭಾ ಸದಸ್ಯೆ ಸೆಲಿನ್ ಕರ್ಕಡ ಹಾಗೂ ಇತರರು ಉಪಸ್ಥಿತರಿದ್ದರು.

ಶಂಕುಸ್ಥಾಪನೆಗೊಂಡ ವಿವಿಧ ಕಾಮಗಾರಿಗಳ ವಿವರ:
ಕಡೆಕಾರು ಪಡುಕರೆಯಲ್ಲಿ 50 ಲಕ್ಷ ರೂ. ಮೊತ್ತದಲ್ಲಿ ನದಿ ದಂಡೆ ಸಂರಕ್ಷಣಾ ಕಾಮಗಾರಿ, ಕೊಡವೂರು ಚೆನ್ನಂಗಡಿ ಮೂಡಬೆಟ್ಟು ವಾರ್ಡಿನ ಕಲ್ಮಾಡಿ ಹೊಳೆಗೆ ಆಯ್ದ ಭಾಗಗಳಿಗೆ 50 ಲಕ್ಷ ರೂ.ಮೊತ್ತದಲ್ಲಿ ನದಿ ದಂಡೆ ಅಭಿವೃದ್ಧಿ ಕಾಮಗಾರಿ, ಕಲ್ಯಾಣಪುರ ಗ್ರಾಮದ ಮೂಡು ತೋನ್ಸೆ ನಿಡಂಬಳ್ಳಿ ಎಂಬಲ್ಲಿ ನದಿ ದಂಡೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 50 ಲಕ್ಷ ರೂ., ಉಪ್ಪೂರು ಗ್ರಾಪಂನ ನಡುಬೆಟ್ಟು ಎಂಬಲ್ಲಿ ಭಾಸ್ಕರ ಮಾಸ್ಟರ್ ಮನೆಯಿಂದ 7ನೇ ಮಾರಿಗುಡಿವರೆಗೆ ನದಿ ದಂಡೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 50 ಲಕ್ಷ ರೂ.

ಕಡಿಯಾಳಿ ವಾರ್ಡ್‌ನ ಸಗ್ರಿ ಗೋಪಾಲ ನಾಯಕ ಮನೆ ಬಳಿಯಿಂದ ಗುಂಡಿಬೈಲು ನಾಗ ಬನದವರೆಗೆ ಆಯ್ದ ಭಾಗಗಳಲ್ಲಿ ನದಿ ದಂಡೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 50 ಲಕ್ಷ, ಕಲ್ಮಾಡಿ ಮಾರಿಗುಡಿಯಿಂದ ಕಲ್ಯಾಣಿ ಪೂಜಾರ್ತಿ ಮನೆಯವರೆಗೆ ನದಿ ದಂಡೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 44.26 ಲಕ್ಷ ರೂ., ಕಡೆಕಾರು ಗ್ರಾಮದ ಸಸಿ ತೋಟ ಮತ್ತು ಶಿವಳ್ಳಿ ಗ್ರಾಮದ ಪೆರಂಪಲ್ಲಿ ಆಮ್ಮಣ್ಣಿ ಪೂಜಾರ್ತಿ ಮನೆ ಬಳಿ ನದಿ ದಂಡೆ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 45 ಲಕ್ಷ ರೂ. ಹಾಗೂ ಬೊಬ್ಬರ್ಯ ಪಾದೆ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟಿನ ಮೇಲ್ಪದರ ಕೊಡವೂರು ಚೆನ್ನಂಗಡಿ ತಿರುವಿನ ಬಳಿ ಅಭಿವೃದ್ಧಿ ಕಾಮಗಾರಿ ಅಂದಾಜು ಮೊತ್ತ 6 ಲಕ್ಷ ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News