×
Ad

ಡಿ.18ರಂದು ಡಾ.ಎನ್.ಟಿ.ಭಟ್ ಪುಸ್ತಕ ಬಿಡುಗಡೆ

Update: 2019-12-13 21:06 IST

ಉಡುಪಿ, ಡಿ.13: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಪ್ ಹೈಯರ್ ಎಜ್ಯುಕೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಆಂಗ್ಲ ಮತ್ತು ಜರ್ಮನ್ ಭಾಷಾ ವಿದ್ವಾಂಸರಾದ ಡಾ.ಎನ್. ತಿರುಮಲೇಶ್ವರ ಭಟ್ ಅವರ ‘ಪೋಲ್ಸ್ ಅಪಾರ್ಟ್, ರೋಲ್ಸ್ ಅಲೈಕ್’ ಪುಸ್ತಕದ ಬಿಡುಗಡೆ ಸಮಾರಂಭ ಡಿ.18ರ ಬುಧವಾರ ಸಂಜೆ 4:00 ಗಂಟೆಗೆ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ಅಧ್ಯಕ್ಷತೆಯಲ್ಲಿ ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿಗಳಾದ, ವಿದ್ವಾಂಸ ಡಾ.ಬಿ.ಎ ವಿವೇಕ ರೈ ಕೃತಿಯನ್ನು ಬಿಡುಗಡೆಗೊಳಿ ಸುವರು. ಮಣಿಪಾಲ ಎಂಐಸಿಯ ಪ್ರೊ.ಅನುಪಾ ಲೂವಿಸ್ ಕೃತಿ ಪರಿಚಯ ಮಾಡುವರು ಎಂದು ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News