ಪರ್ಯಾಯ ಶ್ರೀಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ

Update: 2019-12-13 16:20 GMT

ಉಡುಪಿ, ಡಿ.13: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಾಳೆಯಿಂದ ನಡೆಯುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಪ್ರಯುಕ್ತ ಪಲಿಮಾರು ಮಠದ 2 ವರ್ಷ ಪರ್ಯಾಯಾವಧಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳ, ಗಣ್ಯರ ಭೇಟಿ, ಅಲಂಕಾರಗಳು ಮೊದಲಾದ ಘಟನೆಗಳ ಛಾಯಾಚಿತ್ರ ಪ್ರದರ್ಶನ 'ಸುವರ್ಣ ಪರ್ಯಾಯ ದರ್ಶನ' ವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಭೀಮನಕಟ್ಟೆ ಮಠಾಧೀಶ ಶ್ರೀರಘುವರೇಂದ್ರ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ. ಪುರಾಣಿಕ್, ಪರ್ಯಾಯ ಮಠದ ದಿವಾನ ವೇದವ್ಯಾಸ ತಂತ್ರಿ, ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಪರ್ಯಾಯ ಮಠದ ಪಿಆರ್‌ಓ ಶ್ರೀಶ ಭಟ್ ಕಡೆಕಾರ್, ಛಾಯಾಚಿತ್ರಗ್ರಾಹಕರಾದ ಪರಶುರಾಮ ಭಟ್ ಕುಂಜಾರು ಗಿರಿ, ಜನಾರ್ದನ ಕೊಡವೂರು, ರಮೇಶ ಭಟ್ ಎಲ್ಲೂರು, ರಾಘವೇಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಪರ್ಯಾಯ ಮಠದ ಛಾಯಾಚಿತ್ರಗ್ರಾಹಕರಾದ ಪರಶುರಾಮ ಭಟ್ ಚಿತ್ರೀಕರಿಸಿದ, ಸಂಗ್ರಹಿಸಿದ ನೂರಾರು ಛಾಯಾಚಿತ್ರಗಳು ಈ ಪ್ರದರ್ಶನ ದಲ್ಲಿದ್ದು ಮುಂದಿನ ಜನವರಿ 14ರವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News