ಬ್ರೆಕ್ಸಿಟ್ ಬಳಿಕ ಬ್ರಿಟನ್ ಜೊತೆ ಬೃಹತ್ ವ್ಯಾಪಾರ ಒಪ್ಪಂದ: ಟ್ರಂಪ್

Update: 2019-12-13 16:56 GMT

ವಾಶಿಂಗ್ಟನ್, ಡಿ. 13: ಚುನಾವಣೆಯಲ್ಲಿ ಜಯ ಗಳಿಸಿರುವ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರನ್ನು ಅಭಿನಂದಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇನ್ನು ನಮ್ಮ ದೇಶಗಳು ನೂತನ ‘ಬೃಹತ್’ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳಲು ಸ್ವತಂತ್ರವಾಗಿವೆ ಎಂದು ಹೇಳಿದ್ದಾರೆ.

‘‘ಭರ್ಜರಿ ವಿಜಯಕ್ಕಾಗಿ ಬೊರಿಸ್ ಜಾನ್ಸನ್‌ಗೆ ಅಭಿನಂದನೆಗಳು!’’ ಎಂಬುದಾಗಿ ಟ್ರಂಪ್ ಟ್ವೀಟ್ ಮಾಡಿದ್ದಾರೆ.

‘‘ಬ್ರೆಕ್ಸಿಟ್ ಬಳಿಕ, ನೂತನ ಬೃಹತ್ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳಲು ಬ್ರಿಟನ್ ಮತ್ತು ಅಮೆರಿಕ ದೇಶಗಳು ಈಗ ಸ್ವತಂತ್ರವಾಗಿವೆ. ಈ ಒಪ್ಪಂದವು ಐರೋಪ್ಯ ಒಕ್ಕೂಟದ ಜೊತೆಗೆ ಮಾಡಬಹುದಾದ ಯಾವುದೇ ಒಪ್ಪಂದಕ್ಕಿಂತ ದೊಡ್ಡ ಹಾಗೂ ಹೆಚ್ಚು ಆಕರ್ಷಕವಾಗುವ ಎಲ್ಲ ಸಾಧ್ಯತೆಗಳಿವೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News