ಟಿಪ್ಪರ್ ಬ್ರೇಕ್‌ಫೈಲ್: ಬಸ್, ರಿಕ್ಷಾ, ಬೈಕ್‌ಗೆ ಢಿಕ್ಕಿ

Update: 2019-12-13 17:02 GMT

ಮಣಿಪಾಲ, ಡಿ.13: ಟಿಪ್ಪರೊಂದು ಬ್ರೇಕ್‌ಫೈಲ್ ಆದ ಪರಿಣಾಮ ಎದುರಿನಲ್ಲಿ ಹೋಗುತ್ತಿದ್ದ ಬಸ್, ರಿಕ್ಷಾ ಹಾಗೂ ಬೈಕ್‌ಗಳಿಗೆ ಢಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ಮಣಿಪಾಲದ ಐನಾಕ್ಸ್ ಚಿತ್ರಮಂದಿರದ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮಣಿಪಾಲದಿಂದ ಉಡುಪಿಗೆ ಬರುತ್ತಿದ್ದ ಕಾರ್ಕಳ ಸಮೀಪದ ಜಾರ್ಕಳದ ಟಿಪ್ಪರ್ ಬ್ರೇಕ್‌ಫೈಲ್ ಆದ ಪರಿಣಾಮ ಎದುರಿನಿಂದ ಹೋಗುತ್ತಿದ್ದ ಬಸ್‌ಗೆ ಢಿಕ್ಕಿ ಹೊಡೆಯಿತು. ನಂತರ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ರಿಕ್ಷಾಗೆ ಢಿಕ್ಕಿ ಹೊಡೆದ ಟಿಪ್ಪರ್ ಎದುರಿನಲ್ಲಿ ಬುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆಯಿತು.

ಇದರಿಂದ ರಿಕ್ಷಾ ಹಾಗೂ ಬಸ್‌ಗಳಿಗೆ ಸಣ್ಣಪುಟ್ಟ ಹಾನಿ ಸಂಭವಿಸಿದರೆ, ಬೈಕ್ ಸಂಪೂರ್ಣ ನುಜ್ಜುಗುಜ್ಜಾಗಿದೆ. ಬೈಕ್ ಸವಾರ ಸುದರ್ಶನ್ ಗಾಯಗೊಂಡಿದ್ದಾರೆ. ಉಳಿದಂತೆ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News