ಕಲ್ಲಬೆಟ್ಟು : 52ನೇ ವರ್ಷದ ಸತ್ಯನಾರಾಯಣ ಪೂಜೆ, ಸನ್ಮಾನ

Update: 2019-12-13 17:54 GMT

ಮೂಡುಬಿದಿರೆ: ಗಾಂಧೀಜಿಯವರು ಉಪವಾಸ, ಬ್ರಹ್ಮಚರ್ಯೆ ಮತ್ತು ಮೌನವೃತವನ್ನು ಮಾಡುವ ಮೂಲಕ ಸತ್ಯನಿಷ್ಠೆಯನ್ನು ಪಾಲಿಸಿದವರು. ಸತ್ಯನಾರಾಯಣ ದೇವರಿಗೆ ನಾವು ವೃತಾಚರಣೆ ಮಾಡುವ ಮೂಲಕ ನಮ್ಮ ಇಷ್ಠಾರ್ಥಗಳನ್ನು ನೆರವೇರಿಸಿಕೊಳ್ಳಬಹುದು. ಗಾಂಧೀಜಿ ಕೂಡಾ ವೃತಾಚರಣೆಯನ್ನು ಮಾಡುವ ಮೂಲಕ ಬ್ರಿಟಿಷರನ್ನು ಒದ್ದೋಡಿಸಿ ನಮಗೆ ಸ್ವಾತ್ರಂತ್ರ್ಯವನ್ನು ತಂದುಕೊಟ್ಟಿದ್ದಾರೆಂದು  ಪತ್ರಕರ್ತ ಕೃಷ್ಣಕುಮಾರ್ ಹೇಳಿದರು. 

ಅವರು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ಇದರ ವತಿಯಿಂದ ಗುರುವಾರ ಸಂಜೆ ನಡೆದ 52ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಮಾರಂಭದಲ್ಲಿ "ಗಾಂಧೀಜಿಯವರ ಧಾರ್ಮಿಕ ಚಿಂತನೆ"ಯ ಕುರಿತು ಉಪನ್ಯಾಸ ನೀಡಿದರು. ಧರ್ಮ ಮತ್ತು ಧಾರ್ಮಿಕದ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದ ಗಾಂಧೀಜಿಯವರು ಅಸ್ಪøಶ್ಯತೆ ಬಗ್ಗೆ ಹೋರಾಟ ಮಾಡಿದವರು ಎಂದರು.

ಸನ್ಮಾನ: ಶ್ರೀ ಯಕ್ಷನಿಧಿ ಮೂಡುಬಿದಿರೆ (ರಿ) ಇದರ ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳದ ನಿರ್ದೇಶಕ ಶಿವಕುಮಾರ್ ಅವರನ್ನು ಪೂಜಾ ಸಮಿತಿಯ ವತಿಯಿಂದ ಅಧ್ಯಕ್ಷ ಬಾಹುಬಲಿ ಪ್ರಸಾದ್ ಅವರು ಸಮ್ಮಾನಿಸಿದರು. 

ಪುರಸಭಾ ಸದಸ್ಯೆ ಸುಜಾತ ಶಶಿಧರ ಕೋಟ್ಯಾನ್, ಪುರುಷೋತ್ತಮ ಶೆಟ್ಟಿಮತ್ತು ಉದ್ಯಮಿ ಶ್ಯಾಮ್ ಪ್ರಸಾದ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಚಾಲಕ ಸುಂದರ ಶೆಟ್ಟಿ ಉಪಸ್ಥಿತರಿದ್ದರು. 

ಸಮಿತಿಯ ಕಾರ್ಯದರ್ಶಿ ರಮೇಶ್ಚಂದ್ರ ಪಿ.ಸ್ವಾಗತಿಸಿ ವರದಿ ವಾಚಿಸಿದರು. ಶ್ರೇಯಾ ಮಾರ್ಲ ಸಂದೇಶ ವಾಚಿಸಿದರು. ಖಜಾಂಜಿ ಪ್ರದೀಪ್ ರೈ ವಿವಿಧ ಸ್ಪರ್ಧೆಗಳ ಬಹುಮಾನಿತರ ವಿವರ ನೀಡಿದರು. ನಿರಂಜನ ಕೊಡಂಗಲ್ಲು ವಂದಿಸಿದರು.ನಂತರ ಶ್ರೀ ಯಕ್ಷನಿಧಿ ಮೂಡುಬಿದಿರೆ (ರಿ), ಯಕ್ಷಗಾನ ಶಿಕ್ಷಣ ಸಂಸ್ಥೆ ಮತ್ತು ಮಕ್ಕಳ ಮೇಳ ಇದರ ವತಿಯಿಂದ ಶಿವಕುಮಾರ್ ಮೂಡುಬಿದಿರೆ ನಿರ್ದೇಶನದಲ್ಲಿ "ಕೋಟಿ-ಚೆನ್ನಯ" ಯಕ್ಷಗಾನ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News