21ನೇ ಏಷ್ಯಾನ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಫ್: ಗ್ಲೇಡಿಯಸ್ ಪಾಯಸ್ ಗೆ ಚಿನ್ನದ ಪದಕ

Update: 2019-12-13 18:17 GMT

ಬಂಟ್ವಾಳ, ಡಿ. 13: ಮಲೇಶಿಯಾದ ಕೂಚಿಂಗ್ ನಲ್ಲಿ ಇತ್ತೀಚೆಗೆ ನಡೆದ 21ನೇ ಏಷ್ಯಾನ್ ಮಾಸ್ಟಸ್೯ ಅಥ್ಲೆಟಿಕ್ ಚಾಂಪಿಯನ್ ಶಿಫ್ ನಲ್ಲಿ 65+ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ನಿವಾಸಿ ಗ್ಲೇಡಿಯಸ್ ಪಾಯಸ್ ಅವರು 300 ಮೀ.ಹರ್ಡಲ್ಸ್ ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಹಾಗೆಯೇ 80 ಮೀ.ಹರ್ಡಲ್ಸ್ ನಲ್ಲಿ ಬೆಳ್ಳಿ, ತ್ರಿವಿಧ ಜಿಗಿತ, ಎತ್ತರ ಜಿಗಿತ, 4x100ಮೀ.ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಇವರು ಬಂಟ್ವಾಳ ತಾಲೂಕಿನ ಫರ್ಲಾಶಾಲೆಯ ನಿವೃತ್ತ ಶಿಕ್ಷಕಿ ಆಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News