ಉಳ್ಳಾಲ: ಆಡಳಿತಾಧಿಕಾರಿ ನೇಮಕ ಹಿಂಪಡೆಯಲು ಆಗ್ರಹಿಸಿ ಧರಣಿ

Update: 2019-12-13 18:26 GMT

ಉಳ್ಳಾಲ, ಡಿ.13: ಉಳ್ಳಾಲ ದರ್ಗಾಕ್ಕೆ ನೇಮಕ ಮಾಡಿರುವ ಆಡಳಿತಾಧಿಕಾರಿ ನೇಮಕಾತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಉಳ್ಳಾಲ ಜಮಾಅತ್ ಸಂರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಧರಣಿ ನಡೆಯಿತು.

ಈ ಸಂದರ್ಭ ಯು.ಕೆ. ಮುಹಮ್ಮದ್ ಮುಸ್ತಫ ಮಾತನಾಡಿ, ಯಾರೋ ಮಾಡಿದ ಷಡ್ಯಂತ್ರದಿಂದ ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಿಸಿದ್ದು ಸರಿಯಲ್ಲ. ಇದನ್ನು ಕೂಡಲೇ ಹಿಂಪಡೆಯಬೇಕು. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಒತ್ತಾಯಿಸಿದರು.

ಬಳಿಕ ಸಚಿವರು ಮತ್ತು ಅಧಿಕಾರಿಗಳಿಗೆ ಉಳ್ಳಾಲ ನಗರಸಭೆ ಪೌರಾಯುಕ್ತ ರಾಯಪ್ಪ ಅವರ ಮೂಲಕ ಮನವಿ ಸಲ್ಲಿಸಲಾಯಿತು. 

ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಶಾಸಕ ಖಾದರ್, ಮಂಗಳೂರು ಕಮಿಷನರ್ ಹರ್ಷ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ ಸಚಿವ ಕಬೂಬಿ ಚೌಹಾಣ್, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರಿಗೆ ನಗರಸಭೆ ಪೌರಾಯುಕ್ತರ ಮೂಲಕ ಸಂರಕ್ಷಣಾ ಸಮಿತಿ ಸಂಚಾಲಕ ಅಲ್ತಾಫ್ ಮನವಿ ಸಲ್ಲಿಸಿದರು.

ಈ ಸಂದರ್ಭ ನಗರಸಭೆಯ ಮಾಜಿ ಅಧ್ಯಕ್ಷ ಹುಸೈನ್ ಕುಂಞಿಮೋನು, ಕಬೀರ್ ಚಾಯಬ್ಬ, ರಹ್ಮಾನ್ ಮಂಚಿಲ, ಯೂಸುಫ್ ವಕ್ತಾರ್, ಯು.ಕೆ. ಅಬ್ಬಾಸ್, ಕೌನ್ಸಿಲರ್ ಬಶೀರ್, ಜಬ್ಬಾರ್, ಹೈದರ್ ಮೇಲಂಗಡಿ, ಮುಸ್ತಫ ಅಬ್ದುಲ್ಲ, ಫಾರೂಕ್ ಉಳ್ಳಾಲ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News