ಭಾರತದ ಆರ್ಥಿಕತೆ ‘ಐಸಿಯು’ನಲ್ಲಿದೆ: ಮಾಜಿ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌

Update: 2019-12-14 15:57 GMT

ಹೊಸದಿಲ್ಲಿ,ಡಿ.14: ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ‘ಮಹಾ ಹಿಂಜರಿತ ’ಎಂದು ಬಣ್ಣಿಸಿರುವ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ಅವರು,ರಚನಾತ್ಮಕ ಮತ್ತು ಆವರ್ತಕ ಅಂಶಗಳಿಂದಾಗಿ ಅದೀಗ ತೀವ್ರ ನಿಗಾ ಘಟಕ (ಐಸಿಯು)ದಲ್ಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಇಂಟರ್‌ ನ್ಯಾಷನಲ್ ಸೆಂಟರ್‌ ನಲ್ಲಿ ಭಾರತದಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯ ಸ್ಥಾನಿಕ ಪ್ರತಿನಿಧಿ ಜೋಷ್ ಫೆಲ್ಮನ್ ಅವರೊಂದಿಗೆ ತನ್ನ ಸಂಶೋಧನೆಯನ್ನು ಆಧರಿಸಿ ಉಪನ್ಯಾಸವನ್ನು ನೀಡುತ್ತಿದ್ದ ಅವರು,ಆರ್ಥಿಕ ಸೂಚಕಗಳು ಬೆಟ್ಟುಮಾಡುತ್ತಿರುವ ಗಂಭೀರತೆಯೊಂದಿಗೆ ನಾವು ನೋಡಬೇಕಿದೆ. ಆರ್ಥಿಕ ಹಿಂಜರಿತವನ್ನು ಸರಕಾರವು ಗುರುತಿಸಿದೆ ಮತ್ತು ಸಮಸ್ಯೆಗಳನ್ನು ಬಗೆಹರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

20 ವರ್ಷಗಳ ಕಾಲ ದೇಶವು ಭೂ ಮತ್ತು ಕಾರ್ಮಿಕ ಸುಧಾರಣೆಗಳನ್ನು ಕಂಡಿಲ್ಲ,ಆದರೂ 2002-2010ರ ನಡುವೆ ಆರ್ಥಿಕತೆಯು ಉಚ್ಛ್ರಾಯದಲ್ಲಿತ್ತು ಎಂದ ಅವರು,ಇದು ಹಾಲಿ ಮಂದಗತಿ ಅಥವಾ ಹಿಂದಿನ ಬೆಳವಣಿಗೆಯನ್ನು ವಿವರಿಸುವುದಿಲ್ಲ ಎಂದರು.

ಹೂಡಿಕೆಗಳಲ್ಲಿ ಮತ್ತು ರಫ್ತುಗಳಲ್ಲಿ ಕುಸಿತಗಳು ಸದ್ಯದ ಆರ್ಥಿಕ ಸ್ಥಿತಿಗೆ ಕಾರಣವಾಗಿವೆ ಎಂದು ದೂರಿದ ಸುಬ್ರಮಣಿಯನ್,ವ್ಯಕ್ತಿಗತ ಆದಾಯ ತೆರಿಗೆ ಕಡಿತ ಮತ್ತು ಜಿಎಸ್‌ಟಿ ಹೆಚ್ಚಳದಂತಹ ಕ್ರಮಗಳು ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹೆಚ್ಚು ನೆರವಾಗುವುದಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News