ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಕ್ರೀಡಾಕೂಟ

Update: 2019-12-14 16:43 GMT

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಮಾದರಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಕ್ರೀಡಾಕೂಟ ಉಪ್ಪಿನಂಗಡಿಯ ಮಾದರಿ ಶಾಲಾ ವಠಾರದಲ್ಲಿ ನಡೆಯಿತು.  

ಕ್ರೀಡಾಕೂಟವನ್ನು ಗುಂಡೆಸೆತದ ಮೂಲಕ ಉದ್ಘಾಟಿಸಿದ ಹಿರಿಯ ವಿದ್ಯಾರ್ಥಿ ಸಂಘದ ನಿಕಟಪೂರ್ವ ಅಧ್ಯಕ್ಷ ಐ. ಚಂದ್ರಶೇಖರ್ ನಾಯಕ್, 63 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿವರ್ಷ ಆಯೋಜಿಸಲಾಗುವ ಕ್ರೀಡಾಕೂಟ ಹಿರಿಯ ವಿದ್ಯಾರ್ಥಿಗಳ ನಡುವೆ ಸ್ನೇಹಾಚಾರ ವೃದ್ಧಿಗೆ ಕಾರಣವಾಗುತ್ತಿದೆ. ಸಾಮಾಜಿಕ ಸಾಮರಸ್ಯದಲ್ಲಿ ಕ್ರೀಡಾಕೂಟ ಹೆಚ್ಚಿನ ಪಾತ್ರವಹಿಸುತ್ತಿದೆ ಎಂದರು. 

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ವಿಜಯ ಕುಮಾರ್ ಕಲ್ಲಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ದೇವಕಿ, ದೈಹಿಕ ಶಿಕ್ಷಣ ಶಿಕ್ಷಕಿ  ಶ್ರೀಮತಿ ವಂದನಾ, ಸಂಘದ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಪ್ರಮುಖರಾದ ಅಬ್ದುರ್ರಹ್ಮಾನ್ ಯುನಿಕ್, ಮಜೀದ್, ಮಹಮ್ಮದ್ ಇಕ್ಬಾಲ್, ರಫೀಕ್ ಸಿಪಿಸಿ, ಸುನೀಲ್ ಸಂಗಮ್, ನಿಶಿತಾ, ವೈಶಾಲಿ ಮಹೇಶ್, ತ್ರಿವೇಣಿ ,ಹೇಮಾವತಿ, ಪ್ರಮೀಳಾ , ಅಶ್ವಿನಿ, ಮೋಹಿತಾ , ನಿವೇದಿತಾ , ಸಮೀಮಾ, ಪುಷ್ಪಲತಾ ,  ಜಮಾಲುದ್ದೀನ್ ,ಶಬೀರ್ ನಂದಾವರ, ಹರೀಶ್ ನಟ್ಟಿಬೈಲು, ಉಸ್ಮಾನ್ ಆದರ್ಶನಗರ , ಸಿಯಾಕ್ ಕೆಂಪಿ, ಅಶ್ರಫ್ ರಾಮನಗರ, ಅಶ್ರಫ್ ಸಫಾ ಸೇರಿದಂತೆ ಹಲವಾರು ಮಂದಿ ಪ್ರಮುಖರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News