'ನಿಟ್ಟೆ ಇಂಟರ್ ನ್ಯಾಷನಲ್ ಫ್ರೆಂಡ್ಶಿಪ್ ಸೀರೀಸ್' ಕ್ರಿಕೆಟ್ ಪಂದ್ಯಾವಳಿ

Update: 2019-12-14 18:04 GMT

ಕಾರ್ಕಳ: ಮಾತೃಭೂಮಿಯ ಬಗೆಗೆ ನಮ್ಮಲ್ಲಿ ಪ್ರೀತಿ ಹಾಗೂ ಹೆಮ್ಮೆಯ ಮನೋಭಾವವಿರಬೇಕು. ಯಾವುದೇ ಸ್ಪರ್ಧೆಯಾದರೂ ಸೋಲು, ಗೆಲುವು ಸಾಮಾನ್ಯ. ಕ್ರೀಡಾಪಟುಗಳು ತಮ್ಮ ರಾಜ್ಯ/ರಾಷ್ಟ್ರವನ್ನು ಪ್ರತಿನಿಧಿಸುತ್ತಿರುವೆನು ಎಂಬ ಚಿಂತನೆಯೊಂದಿಗೆ ಜವಾಬ್ದಾರಿಯುತ ಆಟವಾಡಬೇಕು" ಎಂದು ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್.ವಿನಯ ಹೆಗ್ಡೆ ಅಭಿಪ್ರಾಯಪಟ್ಟರು.

ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಜರುಗಿದ್ದ ಕರಾವಳಿ ಕ್ರಿಕೆಟ್ ಅಕಾಡೆಮಿಯು ಸಂಘಟಿಸಿದ 18 ವರ್ಷದ ಕೆಳಗಿನ ವಯೋಮಿತಿಯ ನಿಟ್ಟೆ ಇಂಟರ್‍ನ್ಯಾಷನಲ್ ಫ್ರೆಂಡ್ಶಿಪ್ ಸೀರೀಸ್' ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ವಿವಿಧ ದೇಶಗಳ ಪ್ರತಿಭಾವಂತರನ್ನು ಒಂದೆಡೆಸೇರಿಸಿ ಪರಸ್ಪರ ಉತ್ತಮ ಬಾಂಧವ್ಯ ಬೆಳೆಸುವ ಇಂಗಿತದಿಂದ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಇಲ್ಲಿನ ಸೌಲಭ್ಯಗಳ ಗುಣಮಟ್ಟವೂ ಹೆಚ್ಚಲಿದೆ ಎಂದರು.

ಗೌರವ ಅತಿಥಿಯಾಗಿ ಭಾಗವಹಿಸಿದ್ದ ಜಿಂಬಾಬ್ವೆಯ ಹೀತ್ ಸ್ಟ್ರೀಕ್ಸ್ ಇಂಟರ್‍ನ್ಯಾಷನಲ್ ಕ್ರಿಕೆಟ್ ಟ್ರಸ್ಟ್‍ನ ಸಿ.ಇ.ಒ ಜೋಸೆಫ್ ರೇಗೊ ಮತಾನಾಡಿ, ನಿಟ್ಟೆಯ ಕ್ರೀಡಾ ಸೌಲಭ್ಯಗಳು ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಿದೆ. ತಾಂತ್ರಿಕ ಕಾಲೇಜೊಂದು ಈ ರೀತಿ ಕ್ರೀಡಾ ಕ್ಷೇತ್ರಕ್ಕೆ ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಮುಂದಿನ ದಿನಗಳಲ್ಲಿ ಇಂತಹ ಅಂತಾರಾಷ್ಟ್ರೀಯ ತಂಡಗಳೊಂದಿಗೆ ಕ್ರಿಕೆಟ್ ಪಂದ್ಯಾಟಗಳು ಹಲವಾರು ನಡೆಯಬೇಕು ಎಂದರು.

ಪಂದ್ಯಾವಳಿಯಲ್ಲಿ ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹೀತ್ ಸ್ಟ್ರೀಕ್ಸ್ ನೇತೃತ್ವದ ಹೀತ್ ಸ್ಟ್ರೀಕ್ಸ್ ಇಂಟರ್‍ನ್ಯಾಷನಲ್ ಕ್ರಿಕೆಟ್ ಟ್ರಸ್ಟ್ ಜಿಂಬಾಬ್ವೆಯ 18 ವರ್ಷದ ಕೆಳಗಿನ ವಯೋಮಿತಿಯ ತಂಡವು ಭಾಗವಹಿಸಿ ಚ್ಯಾಂಪಿಯನ್‍ಶಿಪ್ ಟ್ರೋಫಿ ತನ್ನದಾಗಿಸಿಕೊಂಡಿತು.

ಕರಾವಳಿ ಜಿಲ್ಲೆಯ ತಂಡಗಳಾದ ಕರಾವಳಿ ಕ್ರಿಕೆಟ್ ಅಕಾಡೆಮಿ ಬ್ಲೂಸ್, ಕರಾವಳಿ ಕ್ರಿಕೆಟ್ ಕ್ಲೀನಿಕ್, ನಿಟ್ಟೆ ಕಾಲೇಜಿನ ತಂಡಗಳೂ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ವೇದಿಕೆಯಲ್ಲಿ ಕರಾವಳಿ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷೆ  ಶಾಂತಿ ಮೋಹನ್, ನಿಟ್ಟೆ ಕ್ಯಾಂಪಸ್‍ನ ರೆಜಿಸ್ಟ್ರಾರ್ ಯೋಗೀಶ್ ಹೆಗ್ಡೆ ಉಪಸ್ಥಿತರಿದ್ದರು.

ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ಸ್ವಾಗತಿಸಿದರು. ಕರಾವಳಿ ಕ್ರಿಕೆಟ್ ಅಕಾಡೆಮಿಯ ಜನರಲ್ ಸೆಕ್ರೆಟರಿ ಸಂತೋಷ್ ಮಿಸ್ಕಿತ್ ವಂದಿಸಿದರು. ಕಂಪ್ಯೂಟರ್‍ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ರೋಶನ್ ಫೆರ್ನಾಂಡಿಸ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News