ಕೊಣಾಜೆ: ಹಟ್ಟಿಯಿಂದ ನಾಲ್ಕು ದನಗಳ ಕಳವು

Update: 2019-12-14 18:15 GMT

ಕೊಣಾಜೆ: ಕೊಣಾಜೆ ಗ್ರಾಮದ ನಡುಪದವಿನ ಕಲ್ಯಾಣಿ ಎಂಬವರ ಮನೆಯ ಹಟ್ಟಿಗೆ ನುಗ್ಗಿದ ದುಷ್ಕರ್ಮಿಗಳು ನಾಲ್ಕು ದನಗಳನ್ನು ಕಳವುಗೈದಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.  ಈ ಬಗ್ಗೆ  ಅವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶುಕ್ರವಾರ ತಡರಾತ್ರಿ ದನಗಳ್ಳರು ಮನೆಯ ಮುಂಭಾಗದಲ್ಲಿ ಹಟ್ಟಿಗೆ ಯಾರಿಗೂ ಅರಿವಾಗದಂತೆ ನುಗ್ಗಿ ನಾಲ್ಕು ದನಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಕಲ್ಯಾಣಿ ಅವರು ಶನಿವಾರದಂದು ಬೆಳಿಗ್ಗೆ ಸುಮಾರು 5.30ರ ವೇಳೆಗೆ ಹಟ್ಟಿಗೆ ಬಂದಾಗಲೇ ಘಟನೆ ಬೆಳಕಿಗೆ ಬಂದಿತ್ತು. ಈ ಬಗ್ಗೆ ಕಲ್ಯಾಣಿ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಕಳೆದ 15 ವರ್ಷಗಳಿಂದ 35ಕ್ಕೂ ಹೆಚ್ಚು ದನಗಳನ್ನು ಕಳ್ಳರು ಕಳವುಗೈದಿದ್ದು, ಕಳೆದ 15 ದಿನಗಳ ಹಿಂದೆಯಷ್ಠೇ ಮೇಯಲು ಬಿಟ್ಟಿದ್ದ ದನವೊಂದನ್ನು ಕಳ್ಳತನ ನಡೆಸಿದ್ದಾರೆ ಎಂದು ಕಲ್ಯಾಣಿ ಬೇಸರ ವ್ಯಕ್ತಪಡಿಸುತ್ತಾರೆ. ಘಟನಾ ಸ್ಥಳಕ್ಕೆ ಕೊಣಾಜೆ ಪೊಲೀಸ್ ಠಾಣೆಯ ಪೋಲೀಸರು, ರೌಡಿ ನಿಗ್ರಹ ದಳದ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ. ಅಲ್ಲದೆ ಪೊಲೀಸರು ಈ ಭಾಗದ ಸಿ.ಸಿ.ಕ್ಯಾಮರಾದ ಪರಿಶೀಲನೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News