ಕೆಸಿರೋಡ್ : ಎಸ್ ವೈ ಎಸ್ ವತಿಯಿಂದ ಉಚಿತ ಸಾಮೂಹಿಕ ವಿವಾಹ

Update: 2019-12-15 12:05 GMT

ಉಳ್ಳಾಲ : ಎಸ್ ವೈಸ್ ಕೆಸಿರೋಡ್ ಸೆಂಟರ್ ಎಂಟನೇ ವರ್ಷದ ಐದು ಜೋಡಿಯ ಉಚಿತ ಸಾಮೂಹಿಕ ವಿವಾಹವು ಕೋಟೆಕಾರ್ ನೂರ್ ಮಹಲ್ ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಸಅದಿಯಾ ಕಾಲೇಜು ಪ್ರೊ. ಹುಸೈನ್ ಸಅದಿ ಕೆಸಿರೋಡ್ ಮಾತನಾಡಿ, ಕೆಲವು ಸಮಸ್ಯೆ ಗಳಿಂದ ವಿವಾಹ ವಾಗದೇ ಉಳಿದಿರುವ ಯುವತಿಯರನ್ನು ಗುರುತಿಸಿ ಅವರಿಗೆ ವಿವಾಹ ಮಾಡಿ ಕೊಡುವುದು ಉತ್ತಮ ಕಾರ್ಯ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಬೊಳ್ಮಾರ್ ಉಸ್ತಾದ್ ನಿಕಾಹ್ ನ ನೇತೃತ್ವ ವಹಿಸಿದ್ದರು. ಸವಣೂರಿನ ಅಬೂಬಕರ್ ಅವರ ಪುತ್ರಿ ನಸ್ರೀನ ಎಂಬ ವಧುವನ್ನು
ಕಾಸರಗೋಡಿನ  ಇಬ್ರಾಹಿಂರ ಪುತ್ರ ಶಾಹುಲ್ ಹಮೀದ್ ಎಂಬ ವರನಿಗೆ, ಸಜಿಪನಡು ಮೊಯ್ದಿನ್ ಕುಂಞಿಯವರ ಪುತ್ರಿ ಆಯಿಷತ್ ಸಫ್ರೀನ ಎಂಬ ವಧುವನ್ನು ಬೋಳಿಯಾರ್ ಅಬ್ದುಲರ ಪುತ್ರ ಮಹಮ್ಮದ್ ಕಬೀರ್ ಎಂಬ ವರನಿಗೆ, ಬಂಟ್ವಾಳ ದ ಬಶೀರ್ ರ ಪುತ್ರಿ ಅಬುಸಾ ಎಂಬ ವಧುವನ್ನು ನಾವೂರು ಖಾದರ್ ಅವರ ಪುತ್ರ ಅಶ್ರಫ್ ಎಂಬ ವರನಿಗೆ, ಸಜಿಪಮೂಡ ಲತೀಫ್ ರವರ ಪುತ್ರಿ ಅವ್ವಮ್ಮ ಎಂಬ ವಧುವನ್ನು ಗುರುಪುರದ ಮಹಮ್ಮದ್ ರವರ ಪುತ್ರ ಹಸೀರ್ ಸದ್ದಾಂ ಎಂಬ ವರನಿಗೆ,ಕುಂಜತ್ತೂರಿನ ಅಬ್ದುಲ್ ರಹಿಮಾನ್ ರ ಪುತ್ರಿ ಸಹನಾ ಎಂಬ ವಧುವನ್ನು ಮಂಜೇಶ್ವರದ ರಹಿಮಾನ್ ರವರ ಪುತ್ರ ಮಹಮ್ಮದ್ ಅಲಿ ಎಂಬ ವರನಿಗೆ ವಿವಾಹ ಮಾಡಿ ಕೊಡಲಾಯಿತು.

ಎಸ್ ವೈಎಸ್ ಕೆಸಿರೋಡ್ ಸೆಂಟರ್ ಮ್ಯಾರೇಜ್ ಸೆಲ್ ಸಂಚಾಲಕ ಉಮರ್ ಮಾಸ್ಟರ್  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಸಿಟಿಎಂ ಸೆಯ್ಯದ್ ಮಹಮ್ಮದ್ ಸಲೀಂ ತಂಙಳ್, ಅಬ್ದುಲ್ ರಶೀದ್ ಝೈನಿ, ಉಸ್ಮಾನ್ ಸ ಅದಿ ಪಟ್ಟೋರಿ, ಎಸ್ ವೈಎಸ್ ಕೆಸಿರೋಡ್ ಸೆಂಟರ್ ಅಧ್ಯಕ್ಷ ಎಂ.ಪಿ.ಮಹಮ್ಮದ್, ಮ್ಯಾರೆಜ್ ಸೆಲ್ ಅಧ್ಯಕ್ಷ ಯು.ಬಿ.ಮುಹಮ್ಮದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News