ದಕ್ಷಿಣ ವಲಯ ಅಂತರ ವಿವಿ ಪುರುಷ ಕಬಡ್ಡಿ ಪಂದ್ಯಾಟ : ಮಂಗಳೂರು ವಿಶ್ವವಿದ್ಯಾನಿಲಯ ತಂಡ ಚಾಂಪಿಯನ್

Update: 2019-12-15 12:16 GMT

ಮಲ್ಪೆ, ಡಿ.15: ಮಂಗಳೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗ, ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕೇಂದ್ರದ ಗಳ ಜಂಟಿ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಮಂಗಳೂರು ವಿವಿ ತಂಡ ಚಾಂಪಿಯನ್ ಆಗಿ ಮೂಡಿಬಂದಿದೆ.

ಅಂತಿಮ ಫೈನಲ್ ಪಂದ್ಯದಲ್ಲಿ ಮಂಗಳೂರು ವಿವಿ ತಂಡವು ಚೆನ್ನೈಯ ವೆಲ್ಸ್ ಇನ್ಸ್ಟಿಟ್ಯೂಟ್ ಆ್ ಸೈನ್ಸ್ ಟೆಕ್ನಾಲಾಜಿ ಆ್ಯಂಡ್ ಅಡ್ವಾನ್ಸ್ ಸ್ಟಡೀಸ್ ತಂಡ ವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಮಂಗಳೂರು ವಿವಿಯು ಪ್ರತ್ಯೇಕ ಪಂದ್ಯಾಟಗಳಲ್ಲಿ ತನ್ನ ಎದುರಾಳಿಯಾಗಿದ್ದ ಮೂರು ತಂಡಗಳನ್ನು ಮಣಿಸಿ, ರಿಷ್ಠ ಆರು ಅಂಕಗಳನ್ನು ಗಳಿಸಿದೆ.

ತಿರುನೇಲ್ವೇಲಿ ಎಂ.ಎಸ್. ವಿಶ್ವವಿದ್ಯಾನಿಲಯ ತಂಡ ತೃತೀಯ ಹಾಗೂ ಚೆನ್ನೈಯ ಎಸ್.ಆರ್.ಎಂ. ವಿಶ್ವವಿದ್ಯಾಲಯ ತಂಡ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ವಲಯದ 7 ರಾಜ್ಯಗಳ ಒಟ್ಟು 91 ವಿವಿ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು.

ಶನಿವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎ.ಎಂ.ಖಾನ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಹೆಗ್ಡೆ, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಕೃಷ್ಣ ಶೆಟ್ಟಿ, ಉದ್ಯಮಿ ಪ್ರಖ್ಯಾತ್ ಶೆಟ್ಟಿ, ಕಾಲೇಜು ಅಭಿವೃದ್ದಿ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಕೊಜಕೊಳಿ, ಸ್ಫೋಟ್ಸ್ ಕ್ಲಬ್ ಅಧ್ಯಕ್ಷ ಶಶಿಧರ ಕುಂದರ್, ಧನಂಜಯ ಕುಂದರ್, ಧನಂಜಯ ಭಟ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕಿಶೋರ್ ಕುಮಾರ್ ಸಿ.ಕೆ., ಉಪ ನಿರ್ದೇಶಕ ಡಾ.ಜೇರಾಲ್ಡ್ ಸಂತೋಷ್ ಡಿಸೋಜ, ಜಿಲ್ಲಾ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಕ್ರೀಡಾ ಸಂಚಾಲಕ ಡಾ.ರಾಮಚಂದ್ರ ಪಾಟ್ಕರ್,ಮೊದಲಾದವರು ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News