ನಿಮ್ಮ ಋಣವನ್ನು ತೀರಿಸುತ್ತೇನೆ: ಪ್ರತಿಪಕ್ಷ ಮತದಾರರಿಗೆ ಬ್ರಿಟನ್ ಪ್ರಧಾನಿ ಭರವಸೆ

Update: 2019-12-15 14:42 GMT

ಲಂಡನ್, ಡಿ. 15: ಉತ್ತರ ಇಂಗ್ಲೆಂಡ್‌ನಲ್ಲಿರುವ ಪ್ರತಿಪಕ್ಷ ಲೇಬರ್ ಪಾರ್ಟಿಯ ಮಾಜಿ ಭದ್ರ ಕೋಟೆಗಳಿಗೆ ಶನಿವಾರ ಭೇಟಿ ನೀಡಿದ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತನ್ನ ಕನ್ಸರ್ವೇಟಿವ್ ಪಕ್ಷದ ವಿಜಯಕ್ಕೆ ದೇಣಿಗೆ ನೀಡಿರುವ ನಿಮ್ಮ ಋಣವನ್ನು ತೀರಿಸುತ್ತೇನೆ ಎಂದು ಹೇಳಿದ್ದಾರೆ.

1987ರಲ್ಲಿ ಮಾರ್ಗರೆಟ್ ಥ್ಯಾಚರ್ ದಾಖಲಿಸಿದ ಭರ್ಜರಿ ವಿಜಯದ ಬಳಿಕ, ಆ ಮಾದರಿಯ ವಿಜಯವೊಂದನ್ನು ಕನ್ಸರ್ವೇಟಿವ್ ಪಕ್ಷವು ಗಳಿಸಿರುವುದು ಇದೇ ಮೊದಲ ಬಾರಿಯಾಗಿದೆ.

ಬ್ರಿಟನ್ ಸಂಸತ್ತಿನ ಕೆಳಮನೆಯಾಗಿರುವ 650 ಸದಸ್ಯ ಬಲದ ಹೌಸ್ ಆಫ್ ಕಾಮನ್ಸ್‌ಗೆ ಗುರುವಾರ ನಡೆದ ಚುನಾವಣೆಯಲ್ಲಿ ಪ್ರಧಾನಿ ಬೊರಿಸ್ ಜಾನ್ಸನ್‌ರ ಕನ್ಸರ್ವೇಟಿವ್ ಪಕ್ಷವು 365 ಸ್ಥಾನಗಳನ್ನು ಗೆದ್ದಿದೆ. ಸರಳ ಬಹುಮತಕ್ಕೆ 326 ಸ್ಥಾನಗಳ ಅಗತ್ಯವಿದೆ. ಪ್ರತಿಪಕ್ಷ ಲೇಬರ್ ಪಾರ್ಟಿಯು 203 ಸ್ಥಾನಗಳನ್ನು ಗೆದ್ದಿದೆ.

‘‘ನಮಗೆ ಮತ ಹಾಕುವುದಕ್ಕಾಗಿ, ಜನರು ತಲೆಮಾರುಗಳ ಮತದಾನ ಪ್ರವೃತ್ತಿಯನ್ನು ಬದಲಾಯಿಸಿದ್ದಾರೆ ಎನ್ನುವುದು ನನಗೆ ಗೊತ್ತು. ಕನ್ಸರ್ವೇಟಿವ್ ಪಕ್ಷದಲ್ಲಿರುವ ನಾವು ಮತ್ತು ನಾನು ನಿಮ್ಮ ಋಣವನ್ನು ಸಂದಾಯ ಮಾಡುತ್ತೇವೆ’’ ಎಂದು ಸೆಜ್‌ ಫೀಲ್ಡ್ ‌ನಲ್ಲಿ ತನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News