ಡಿ. 20: ಮಂಗಳೂರಿನಲ್ಲಿ ಪೌರತ್ವ ಸಂರಕ್ಷಣಾ ಸಮಾವೇಶ

Update: 2019-12-19 07:12 GMT

ಮಂಗಳೂರು, ಡಿ.15: ಕೇಂದ್ರ ಸರಕಾರವು ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ದೇಶಾದ್ಯಂತ ಜಾರಿಗೊಳಿಸಲು ಬಯಸಿರುವ ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ)ಯ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸಮಸ್ತ ಮತ್ತು ಪೋಷಕ ಸಂಘಟನೆಗಳ ವತಿಯಿಂದ ಪೌರತ್ವ ಸಂರಕ್ಷಣಾ ಸಮಾವೇಶವು ಡಿ.20ರಂದು ಸಂಜೆ ನಗರದ ನೆಹರೂ ಮೈದಾನದಲ್ಲಿ ಜರುಗಲಿದೆ.

ಸಮಾವೇಶದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಸಮಾವೇಶ ಸ್ವಾಗತ ಸಮಿತಿಯ ರಕ್ಷಾಧಿಕಾರಿಗಳಾಗಿ ಅಸ್ಸೆಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗಲಡ್ಕ, ಹಾಜಿ ಕೆ.ಮುಹಮ್ಮದ್ ಮಸೂದ್, ಇಬ್ರಾಹಿಂ ಹಾಜಿ ಕೋಡಿಜಾಲ್, ಅಧ್ಯಕ್ಷರಾಗಿ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕನ್ವೀನರ್ ಆಗಿ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಕೋಶಾಧಿಕಾರಿ ಯಾಗಿ ರಝಾಕ್ ಹಾಜಿ ಬಿಸಿ ರೋಡು, ಉಪಾಧ್ಯಕ್ಷರಾಗಿ ಅಸ್ಸೆಯ್ಯದ್ ಜಿಫ್ರಿ ತಂಙಳ್, ಉಸ್ಮಾನುಲ್ ಫೈಝಿ,ಐ ಮೊಯಿದಿನಬ್ಬ ಹಾಜಿ, ಹನೀಫ್ ಹಾಜಿ ಬಂದರ್, ಶರೀಫ್ ಫೈಝಿ ಕಡಬ, ಕೆ.ಅಶ್ರಫ್ ಮಂಗಳೂರು, ವರ್ಕಿಂಗ್ ಕನ್ವೀನರ್ ಆಗಿ ಹಾಜಿ ಎಸ್‌ಬಿ ಮುಹಮ್ಮದ್ ದಾರಿಮಿ, ಕನ್ವೀನರ್‌ಗಳಾಗಿ ಅಝೀಝ್ ದಾರಿಮಿ ಚೊಕ್ಕಬೊಟ್ಟು, ಸದಕತುಲ್ಲಾ ಫೈಝಿ, ಅಶ್ರಫ್ ಫೈಝಿ, ಅನೀಸ್ ಕೌಸರಿ, ಹನೀಫ್ ದಾರಿಮಿ, ಕೆಎಲ್ ದಾರಿಮಿ, ತಬೂಕ್ ದಾರಿಮಿ, ಕಾಸಿಮ್ ದಾರಿಮಿ, ಕುಕ್ಕಿಲ ದಾರಿಮಿ, ಲತೀಫ್ ದಾರಿಮಿ, ಬಾಷಾ ತಂಙಳ್ ಆಯ್ಕೆಯಾಗಿದ್ದಾರೆ.

ಸಮಾವೇಶದ ಯಶಸ್ಸಿಗೆ ಮತ್ತು ಸಮುದಾಯದ ರಕ್ಷಣೆಗಾಗಿ ಡಿ.18ರಂದು ಸಮಸ್ತ ದ ಎಲ್ಲಾ ಮದ್ರಸಗಳಲ್ಲಿ ಪ್ರಾರ್ಥನಾ ದಿನ ಆಚರಿಸಲು ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News