ಎಸ್ಡಿಟಿಯು ಟೆಂಪೋ ಚಾಲಕರ ವತಿಯಿಂದ ಶ್ರಮದಾನ

Update: 2019-12-15 16:39 GMT

ಮಂಗಳೂರು : ಸಂಪೂರ್ಣ ಹದಕ್ಕೆಟ್ಟ ನಗರದ ಕೆನರಾ ಗೂಡ್ಸ್ ಬೀಬಿ ಅಲಬಿಯಿಂದ ಬಂದರ್ ಪೊಲೀಸ್ ಸ್ಟೇಷನ್ ವರೆಗಿನ ರಸ್ತೆಯನ್ನು ಅಭಿವೃದ್ಧಿಗೊಳಿಸಲು ಆಗ್ರಹಿಸಿ ಎಸ್ಡಿಟಿಯು ವತಿಯಿಂದ ಬಂದರ್ ಟೆಂಪೋ ಚಾಲಕ ಮಾಲಕರ ಯೂನಿಯನ್ ವತಿಯಿಂದ ರವಿವಾರ ಶ್ರಮದಾನ ಮಾಡುವ ಮೂಲಕ ಆಗ್ರಹಿಸಲಾಯಿತು.

ಈ ಸಂದರ್ಭ ಮಾತನಾಡಿದ ಸೋಷಿಯಲ್ ಡೆಮೊಕ್ರೆಟಿಕ್ ಆಟೋ ಚಾಲಕರ ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ಪರ್ಲಿಯಾ, ಮೂಲ ಸೌಕರ್ಯ ಒದಗಿಸಿಕೊಡಬೇಕಾಗಿದ್ದು ಮಾನಪಾ ಜನಪ್ರತಿನಿಧಿಗಳ ಕರ್ತವ್ಯವಾಗಿದೆ ಆದರೆ ಗುಂಡಿ ತುಂಬಿದ ಇಲ್ಲಿನ ರಸ್ತೆಯನ್ನು ನೋಡಿದರೆ ಸ್ಥಳೀಯಾಡಳಿತ ಇದೆಯೋ ಎಂದು ಸಂಶಯ ಬರುತ್ತಿದೆ, ಇಲ್ಲಿನ ಗೂಡ್ಸ್ ಟೆಂಪೋ ಚಾಲಕರಿಗೆ ಇರುವ ಸಾಮಾಜಿಕ ಕಳಕಳಿ ಇಲ್ಲಿನ ಜನಪ್ರತಿನಿಧಿಗಳಿಗೆ ಇಲ್ಲದೇ ಹೋಗಿದ್ದು ದುರಾದೃಷ್ಟವಾಗಿದೆ ಎಂದು ಹೇಳಿದರು.

ಶ್ರಮದಾನದ ನೇತೃತ್ವವನ್ನು ರಮೀಜ್ ಪಾಂಡೇಶ್ವರ ವಹಿಸಿದರು, ಎಸ್ಡಿಟಿಯು ಜಿಲ್ಲಾ ಸಮಿತಿ ಸದಸ್ಯ ನೌಫಾಲ್ ಕುದ್ರೋಳಿ, ಆಟೋ ಯೂನಿಯನ್ ಜಿಲ್ಲಾ ಉಪಾಧ್ಯಕ್ಷ ಹಕೀಮ್ ಕಾನ, ಮುಖಂಡರಾದ ಅಮೀನ್ ಬಂದರ್, ಯೂನಿಯನ್ ನಗರ ಸಮಿತಿ ಅಧ್ಯಕ್ಷ ಮಜೀದ್ ಉಳ್ಳಾಲ, ಸಮಿತಿ ಸದಸ್ಯ  ಬದ್ರು ತುಂಬೆ, ಬಶೀರ್,  ನಾಸಿರ್, ಇರ್ಫಾನ್, ಹರ್ಷಾದ್, ಅಜೀತ್, ಶಾಫಿ, ಇರ್ಷಾದ್, ಮುಸ್ತಾಫಾ ಶಾಮೀರ್, ಸಫ್ವಾನ್ 

ಹೈದರ್, ನಂದೂ, ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News