ಸುರಿಬೈಲು ದಾರುಲ್ ಅಶ್ ಅರಿಯ್ಯ: ಆಂಡ್ ನೇರ್ಚೆ, ಅನುಸ್ಮರಣೆ, ಹನೀಫಿ ಸನದುದಾನ ಮಹಾ ಸಮ್ಮೇಳನ

Update: 2019-12-16 09:58 GMT

ವಿಟ್ಲ : ಶೈಖುನಾ ಸುರಿಬೈಲು ಉಸ್ತಾದ್ ಅವರ ಆಂಡ್ ನೇರ್ಚೆ ಹಾಗೂ ಶೈಖುನಾ ಮರ್‍ಹೂಂ ಪಿ.ಎ ಉಸ್ತಾದ್ ಅನುಸ್ಮರಣೆ, ಹನೀಫಿ ಸನದುದಾನ ಮಹಾಸಮ್ಮೇಳನದ ಸಮಾರೋಪ ಇತ್ತೀಚೆಗೆ ಸುರಿಬೈಲು ದಾರುಲ್ ಅಶ್ ಅರಿಯ್ಯದಲ್ಲಿ ನಡೆಯಿತು.

ಮೌಲನಾ ಪೇರೋಡ್ ಅಬ್ದುಲ್ ರಹಿಮಾನ್ ಸಖಾಫಿ ಮಾತನಾಡಿ, ಧಾರ್ಮಿಕ ಚೌಕಟ್ಟಿನಲ್ಲಿ ಜೀವನ ನಡೆಸಲು ಧಾರ್ಮಿಕ ಶಿಕ್ಷಣ ಪ್ರೇರಣೆಯಾಗಿದೆ. ಕಲಿಕೆಗೆ ಎಂದು ಕೊನೆ ಇಲ್ಲ. ಅದು ಜೀವನಪೂರ್ತಿ ಇರುತ್ತದೆ. ಶಿಕ್ಷಣ ಪಡೆದಾಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.

ಕರ್ನಾಟಕ ಮುಸ್ಲಿಂ ಜಮಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು ಮಾತನಾಡಿ, ನಾವು ಗೆಲ್ಲಿಸಿದ ಜನಪ್ರತಿನಿಧಿಗಳು ಇಂದು ನಮ್ಮ ವಿರುದ್ಧವೇ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳ ಉದ್ದೇಶವನ್ನು ಈಡೇರಲು ನಾವು ಎಂದಿಗೂ ಬಿಡುವುದಿಲ್ಲ ಎಂದು ಎನ್‍ಆರ್‍ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ದಾರುಲ್ ಅಶ್ ಅರಿಯ್ಯದ ಅಧ್ಯಕ್ಷ ಮಹ್‍ಮೂದ್ ಫೈಝಿ ವಾಲೆಮುಂಡೋವ್ ಅಧ್ಯಕ್ಷತೆ ವಹಿಸಿದ್ದರು. ಶೈಖುನಾ ತಾಜುಲ್ ಫುಖಹಾಅ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಿದರು. ಅಸ್ಸಯ್ಯಿದ್ ಅಶ್ರಫ್ ತಂಙಳ್ ಆದೂರು ದುಆ ಆಶೀರ್ವಚನ ನೀಡಿದರು. ಶೈಖುನಾ ತಾಜುಶ್ಯರೀ ಅಲಿಕುಂಞ ಉಸ್ತಾದ್ ಅನುಗ್ರಹ ಸಂದೇಶ ನೀಡಿದರು. ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ವಿದ್ಯಾರ್ಥಿಗಳಿಗೆ ಸನದುದಾನ ಮಾಡಿದರು. ಸಂಜೆ ಬೋಳಂತೂರುನಿಂದ ಅಶ್‍ಅರಿಯ್ಯದ ವರೆಗೆ ಸಂದಲ್ ಮೆರವಣಿಗೆ ನಡೆಯಿತು.

ಶಿಹಾಬುದ್ದೀನ್ ತಂಙಳ್ ಮದಕ, ಅಬೂಬಕರ್ ಮುಸ್ಲಿಯಾರ್ ಬೊಳ್ಮಾರ್, ಅಬೂಬಕ್ಕರ್ ಲತೀಫಿ ಎಣ್ಮೂರು, ಮಂಚಿ ಉಸ್ತಾದ್, ಅಬ್ದುಲ್ಲ ಮುಸ್ಲಿಯಾರ್ ದುಬೈ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮುಹಮ್ಮದ್, ಎಸ್‍ಎಂಎ ರಾಜ್ಯ ಸಮಿತಿ ಸದಸ್ಯ ಹಾಜಿ ಕೆ.ಎ ಹಮೀದ್ ಕೊಡಂಗಾಯಿ, ಸ್ವಾಗತ ಸಮಿತಿ ಅಧ್ಯಕ್ಷ ಸುಲೈಮಾನ್ ಹಾಜಿ ಸಿಂಗಾರಿ ನಾರ್ಶ, ಮುತ್ತಲಿಬ್ ಹಾಜಿ ನಾರ್ಶ, ಸೇರಿದಂತೆ ಹಲವು ಉಮರಾ ಉಲಮಾಗಳು ಉಪಸ್ಥಿತರಿದ್ದರು. ದಾರುಲ್ ಅಶ್ ಅರಿಯ್ಯದ ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ ಸ್ವಾಗತಿಸಿ, ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News