ಡಿ.19: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
Update: 2019-12-16 20:35 IST
ಮಂಗಳೂರು, ಡಿ.16: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮತ್ತು ಪ್ರಜ್ಞಾವಂತ ಜನತೆಯ ಆತಂಕಕ್ಕೆ ಸ್ಪಂದಿಸಿ, ದೇಶದ ಐದು ಎಡಪಕ್ಷಗಳು ಡಿ.19ರಂದು ಅಖಿಲ ಭಾರತ ಪ್ರತಿಭಟನೆಗೆ ಕರೆ ನೀಡಿವೆ.
ಅದರಂತೆ ದ.ಕ.ಜಿಲ್ಲಾ ಸಿಪಿಐ ಮತ್ತು ಸಿಪಿಎಂ ನೇತೃತ್ವದಲ್ಲಿ ಡಿ.19ರಂದು ಸಂಜೆ 4 ಗಂಟೆಗೆ ದ.ಕ.ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಿವೆ ಎಂದು ಪ್ರಕಟನೆ ತಿಳಿಸಿದೆ.