ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಸಾಮೂಹಿಕ ಧ್ರುವೀಕರಣದ ಅಸ್ತ್ರ: ರಾಹುಲ್ ಗಾಂಧಿ
Update: 2019-12-16 20:48 IST
ಹೊಸದಿಲ್ಲಿ, ಡಿ. 16: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಫ್ಯಾಶಿಸ್ಟ್‌ಗಳ ಸಾಮೂಹಿಕ ಧ್ರುವೀಕರಣದ ಅಸ್ತ್ರ ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಶಾಂತಿಯುತ ಸತ್ಯಾಗ್ರಹ ಇದರ ವಿರುದ್ಧದ ಅಸ್ತ್ರ ಎಂದಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರ ಜೊತೆಗೆ ನಾನು ಸಂಘಟಿತವಾಗಿ ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹೇಳಿದ್ದಾರೆ.