×
Ad

‘ಭಾವೈಕ್ಯತೆಯ ಸಂಗಮ-ದೀಪಾವಳಿ ಕ್ರಿಸ್ಮಸ್ ಸಮಾಗಮ’ ಕಾರ್ಯಕ್ರಮ

Update: 2019-12-16 21:22 IST

ಮಂಗಳೂರು, ಡಿ.16: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಸೋಮವಾರ ‘ಭಾವೈಕ್ಯತೆಯ ಸಂಗಮ-ದೀಪಾವಳಿ ಕ್ರಿಸ್ಮಸ್ ಸಮಾಗಮ-2019’ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ಯು.ಟಿ.ಖಾದರ್ ಮಾತನಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಹಬ್ಬಗಳು ಅಡಿಪಾಯವಿದ್ದಂತೆ. ಜನಸಾಮಾನ್ಯರು ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದದ ಮೂಲಕ ಕೂಡಿ ಬಾಳುವ ಸಂದೇಶವನ್ನು ಪ್ರತಿ ಹಬ್ಬಗಳು ನೀಡುತ್ತವೆ ಎಂದರು.

ಮಾಜಿ ಶಾಸಕ ಜೆ. ಆರ್. ಲೋಬೋ ಮಾತನಾಡಿ ಸಮಾಜ, ಮನಸ್ಸುಗಳನ್ನು ಒಗ್ಗೂಡಿಸಿ ಆ ಮೂಲಕ ದೇವರ ಆರಾಧನೆ ಮಾಡುವುದೇ ಹಬ್ಬಗಳ ಆಚರಣೆಯ ಆಶಯ ಎಂದರು.

ಮಂಗಳೂರು ಬಿಷಪ್ ಡಾ. ಪೀಟರ್ ಪೌಲ್ ಸಲ್ಡಾನ್ಹ ಆಶೀರ್ವಚನ ನೀಡಿದರು. ಯೆನೆಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೊಯಾ ಅಬ್ದುಲ್ಲ ಕುಂಞಿ, ವಿಧಾನ ಪರಿಷತ್ ಸದಸ್ಯ ಕೆ. ಹರೀಶ್‌ಕುಮಾರ್, ಕಾಂಗ್ರೆಸ್ ಮುಖಂಡ ಇಬ್ರಾಹಿಂ ಕೋಡಿಜಾಲ್, ಉದ್ಯಮಿಗಳಾದ ಜಯರಾಮ ಶೇಖರ್, ವಾಲ್ಟರ್ ಡಿಸೋಜ, ಎಲಿಯಾಸ್ ಸ್ಯಾಂಟಿಸ್, ಅಮೃತ್ ಕದ್ರಿ, ಜಿಪಂ ಸದಸ್ಯ ಯು. ಪಿ. ಇಬ್ರಾಹೀಂ, ಅಬ್ದುಲ್ ಸಲೀಂ, ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ವೈ. ಮರಿಸ್ವಾಮಿ, ಕಾರ್ಪೊರೇಟರ್‌ಗಳಾದ ಟಿ. ಪ್ರವೀಣ್‌ಚಂದ್ರ ಆಳ್ವ, ಕೇಶವ ಮರೋಳಿ, ಅಶ್ರ್ ಬಜಾಲ್, ಅನಿಲ್ ಕುಮಾರ್, ಎ.ಸಿ.ವಿನಯರಾಜ್, ಝೀನತ್ ಸಂಶುದ್ದೀನ್, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನಾರಾಯಣ ಕೋಟ್ಯಾನ್, ತಾಪಂ ಮಾಜಿ ಸದಸ್ಯ ಅಹಮ್ಮದ್ ಬಾವ, ಕೆಸಿಸಿಐ ಅಧ್ಯಕ್ಷ ಐಸಾಕ್ ವಾಸ್, ಡಾ. ಕವಿತಾ ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಹಬ್ಬದ ಅಂಗವಾಗಿ ಅರ್ಹರಿಗೆ ಅಕ್ಕಿ ವಿತರಿಸಲಾಯಿತು.

ಐವನ್ ಡಿಸೋಜರ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಈ ವೇಳೆ ಬಿಡುಗಡೆಗೊಳಿ ಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News