×
Ad

ಡಿ.22ರಿಂದ 28ರವರೆಗೆ ಕೆಮ್ತೂರು ತುಳುನಾಟಕ ಸ್ಪರ್ಧೆ

Update: 2019-12-16 21:25 IST

ಉಡುಪಿ, ಡಿ.16: ಉಡುಪಿ ತುಳುಕೂಟದ ವತಿಯಿಂದ ಹಿರಿಯ ನಾಟಕ ಕರ್ಮಿ ದಿ.ಕೆಮ್ತೂರು ದೊಡ್ಡಣಶೆಟ್ಟಿಯವರ ನೆನಪಿನಲ್ಲಿ ನಡೆಸಲಾಗುವ 18ನೆ ವರ್ಷದ ತುಳುನಾಟಕ ಸ್ಪರ್ಧೆಯು ಡಿ.22ರಿಂದ 28ರವೆರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಪ್ರತಿದಿನ ಸಂಜೆ 6.30ಕ್ಕೆ ಜರಗಲಿದೆ.

ನಾಟಕ ಸ್ಪರ್ಧೆಯನ್ನು ಡಿ.22ರಂದು ಸಂಜೆ 6 ಗಂಟೆಗೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಜ್ ರೆಹಮಾನ್, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ಮುಖ್ಯ ಅತಿಥಿಗಳಾಗಿರು ವರು. ಉಡುಪಿ ತುಳುಕೂಟದ ಅದ್ಯಕ್ಷ ವಿ.ಜಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿರುವರು.

ನಂತರ ಮಂಗಳೂರು ಪಾದುವರಂಗ ಅಧ್ಯಯನ ಕೇಂದ್ರದಿಂದ ‘ಕೆಂಡೋ ನಿಯನ್ಸ್’, ಡಿ.23ರಂದು ಕಟಪಾಡಿ ವನಸುಮ ವೇದಿಕೆಯಿಂದ ‘ಇಲ್‌ಲ್ ಇಲ್‌ಲ್ದ ಕಥೆ’, 24ರಂದು ಮಂಗಳೂರು ಜರ್ನಿ ಥೇಟರ್ಸ್ ಗ್ರೂಪ್‌ನಿಂದ ಗೋಧೂಳು, 25ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ನೆತ್ತರ ಕಲ್ಯಾಣ, 26ರಂದು ಉಡುಪಿ ಕರಾವಳಿ ಕಲಾವಿದರು ತಂಡದಿಂದ ಪಗರಿದ ಸುಡುಕಳ, 27ರಂದು ಮುದ್ರಾಡಿ ನಾಟ್ಕದೂರು ನಮ ತುಳುವೆರ್ ಸಂಘಟನೆ ಯಿಂದ ಪತ್ತ್ ತರತ್ತಾಯನ ಕನತ ಕಥೆ, ಡಿ.28ರಂದು ಕೊಡವೂರು ನವಸುಮ ರಂಗಮಂಚದಿಂದ ಮರಣದ ಲೆಪ್ಪುನಾಟಕ ಪ್ರದರ್ಶನ ನಡೆಯಲಿದೆ ಎಂದು ತುಳು ನಾಟಕ ಸಂಚಾಲಕ ಬಿ.ಪ್ರಭಾಕರ ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News