ರಾಜ್ಯ ಹೆದ್ದಾರಿ ಬದಿ ವಾಸಿಸುತ್ತಿದ್ದ ಕುಟುಂಬಗಳ ಸ್ಥಳಾಂತರ
Update: 2019-12-16 22:22 IST
ಉಡುಪಿ, ಡಿ.16: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಮತ್ತು ಪಡುಬಿದ್ರೆ ಪೊಲೀಸ್ ಠಾಣೆ ಜಂಟಿ ಕಾರ್ಯಾಚರಣೆ ನಡೆಸಿ ಪಡುಬಿದ್ರೆ- ಕಾರ್ಕಳ ರಾಜ್ಯ ಹೆದ್ದಾರಿಯ ಬದಿಯಲ್ಲಿ ವಾಸಿಸುತ್ತಿದ್ದ ಕಮ್ಮಾರಿಕೆ ಕಸುಬು ಮಾಡಿಕೊಂಡಿದ್ದ ಮದ್ಯಪ್ರದೇಶದ ಭೋಪಾಲ್ ಮೂಲದ 3 ಕುಟುಂಬಗಳ ಒಟ್ಟು 15 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಅವರು ಟೆಂಟ್ ಹಾಕಿಕೊಂಡಿದ್ದ ಸ್ಥಳ ಅಪಘಾತ ಸ್ಥಳವಾಗಿರುವುದರಿಂದ ಮತ್ತು ಮಕ್ಕಳ ಸಂರಕ್ಷಣೆಯ ದೃಷ್ಟಿಯಿಂದ ಈ ಕುಟುಂಬವನ್ನು ಅಲ್ಲಿಂದ ತೆರವು ಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸದಾನಂದ, ಕಾನೂನು ಪರೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಸಮಾಜ ಕಾರ್ಯಕರ್ತೆ ಗ್ಲೀಶಾ ಮೊಂತೆರೊ ಹಾಗೂ ಪಡುಬಿದ್ರೆ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಸುರೇಶ್ ಎಂ. ಭಾಗವಹಿಸಿದ್ದರು.